ಗುಂಡೀರು ಅಂಗನವಾಡಿ ಕೇಂದ್ರ ಉದ್ಘಾಟನೆ

 

ಮೂಡುಬಿದಿರೆ: ಮಕ್ಕಳ ಪುಟ್ಟ ಮನೆಯೇ ಅಂಗನವಾಡಿ ಕೇಂದ್ರ. ಮಕ್ಕಳಿಗೆ ತಾಯಿಯ ಸ್ಥಾನದಲ್ಲಿ ನಿಂತು ಪೌಷ್ಠಿಕ ಆಹಾರ ನೀಡಿ ಮಾನಸಿಕ ಸ್ಥೈರ್ಯವನ್ನು ತುಂಬಿಸುವವರು ಅಂಗನವಾಡಿಯ ಕಾರ್ಯಕರ್ತೆಯರು. ಅಲ್ಲದೆ ಸಂಸ್ಕೃತಿ, ಸಂಪ್ರದಾಯಗಳು, ಆಚಾರ-ವಿಚಾರಗಳನ್ನು ಅರಿಯಲು ಸಾಧ್ಯವಿರುವುದೇ ಈ  ಕನ್ನಡ ಮಾಧ್ಯಮದ ಅಂಗನವಾಡಿ ಕೇಂದ್ರಗಳಲ್ಲಿ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.  

ದ.ಕ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ, ತೆಂಕಮಿಜಾರು ಗ್ರಾಮ ಪಂಚಾಯತ್ ಇವುಗಳ  ಸಹಯೋಗದಲ್ಲಿ ನೂತನವಾಗಿ ನಿರ್ಮಿಸಲಾದ ಗುಂಡೀರು ಅಂಗನವಾಡಿ ಕೇಂದ್ರವನ್ನು  ಉದ್ಘಾಟಿಸಿ  ಮಾತನಾಡಿದರು.

ತೆಂಕಮಿಜಾರು ಗ್ರಾ.ಪಂ.ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆ ವಹಿಸಿದ್ದರು. ಗುತ್ತಿಗೆದಾರ ಅಬ್ದುಲ್ ಲತೀಫ್ ಅವರನ್ನು ಗೌರವಿಸಲಾಯಿತು. ಪಂಚಾಯತ್ ಉಪಾಧ್ಯಕ್ಷೆ ಶಮಿತಾ ಶೆಟ್ಟಿ, ಸದಸ್ಯರಾದ ಹರಿಪ್ರಸಾದ್ ಶೆಟ್ಟಿ, ಕರುಣಾಕರ ಶೆಟ್ಟಿ, ನಿಶಾ ಶೆಟ್ಟಿ, ನೇಮಿರಾಜ್ ಶೆಟ್ಟಿ, ಜಯಲಕ್ಷ್ಮೀ ಶೆಟ್ಟಿಗಾರ್, ಶಾಲಿನಿ ಸಾಲ್ಯಾನ್, ನಿವೃತ್ತ ಸೈನಿಕ ಎಂ.ಜಿ.ಮಹಮ್ಮದ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ದಯಾವತಿ, ತೋಡಾರು ದರ್ಗಾ ಸಮಿತಿಯ ಅಧ್ಯಕ್ಷ ಎಂ.ಎ.ಎಸ್ ಆಸಿಫ್, ಗುಂಡೀರು ಮದ್ರಸಾದ ಅಧ್ಯಕ್ಷ ಅಶ್ರಫ್, ಎಂಜಿನಿಯರ್ ವಿಶ್ವನಾಥ ಶೆಟ್ಟಿ, ಪಿಡಿಒ ಪ್ರಕಾಶ್ ಪಿ., ಬಾಲವಿಕಾಸ ಸಮಿತಿಯ ಅಧ್ಯಕ್ಷೆ ತ್ರಿವೇಣಿ ಭರತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮೇಲ್ವೀಚಾರಕಿ ಸ್ವಾಗತಿಸಿ ವಂದಿಸಿದರು. ಪಂಚಾಯತ್ ಸಿಬ್ಬಂದಿ ರಾಕೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments

Advertisement