ಮಿಥುನ್ ರೈ,ಅಭಯಚಂದ್ರ ಜೈನ್ ಮೇಲೆ ಮೂಡುಬಿದಿರೆ ಬಿಜೆಪಿ ಅಧ್ಯಕ್ಷ ಗರಂ!:ಡೀಮ್ಡ್ ಫಾರೆಸ್ಟ್ ಬಗ್ಗೆ ಶಾಸಕರ ಕ್ರಮದ ಬಗ್ಗೆ ಮಾಹಿತಿ

 

ಮೂಡುಬಿದಿರೆ: ಡೀಮ್ಡ್ ಫಾರೆಸ್ಟ್ ಕಾನೂನನ್ನು ಸರಕಾರ  ಸರಳೀಕೃತಗೊಳಿಸಿದರಿಂದ  ಕ್ಷೇತ್ರದಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ಅವರ ಸೂಚನೆಯಂತೆ 94ಸಿ ಮತ್ತು 94ಸಿಸಿ ಯ ಪಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದ್ದು, ಆದರೆ ಮಾಜಿ ಸಚಿವ ಅಭಯಚಂದ್ರ ಜೈನ್ ಹಾಗೂ ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾಹಿತಿ ಕೊರತೆಯಿಂದ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲ ಅಧ್ಯಕ್ಷ ಸುನೀಲ್ ಆಳ್ವ ಆರೋಪಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಡೀಮ್ಡ್ ಫಾರೆಸ್ಟ್ ಪಟ್ಟಿಯಿಂದ ಸರ್ವೆ ನಂಬರ್‌ ಗಳನ್ನು ತೆಗೆಯಲು ರಾಜ್ಯ ಸರ್ಕಾರ ಈಗಾಗಲೇ 3ಸಾವಿರ ಭೂಮಾಪಕರನ್ನು ತಾತ್ಕಾಲಿಕವಾಗಿ ನೇಮಿಸಿ ಭೂ ಮರುಪರಿಶೀಲನೆ ನಡೆಸುತ್ತಿದೆ. ಮೂಡುಬಿದಿರೆ ಕ್ಷೇತ್ರದಲ್ಲಿ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ಕುಳಿತವರಿಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಬಗರ್ ಹುಕುಂ, ಕುಮ್ಕಿ, ಬಾನೆ, ಗೋಮಾಲ ವಿರಹಿತ ಯೋಜನೆಯಲ್ಲಿ ಭೂಮಿ ಮಂಜೂರು ಮಾಡುವುದಾಗಿ ಕಂದಾಯ ಸಚಿವ ಆರ್ ಅಶೋಕ್ ಈಗಾಗಲೇ ಘೋಷಣೆ ಮಾಡಿದ್ದು ಅದು ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು.

ಪುರಸಭಾ ವ್ಯಾಪ್ತಿಯ 3 ಕಿಮೀ `ಬಫರ್ ಝೋನ್' ಪ್ರದೇಶದಲ್ಲಿ ಅರ್ಜಿ ಸಲ್ಲಿಸಿದವರಿಗೂ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಶಾಸಕರು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ. ಆದರೆ ಅಕ್ರಮ-ಸಕ್ರಮ ಅರ್ಜಿಗಳು ಇತ್ಯರ್ಥ ವಾಗುವ ಹೊತ್ತಿನಲ್ಲಿ ಏನೂ ಕೆಲಸವಾಗುತ್ತಿಲ್ಲ ಎಂಬಂತೆ ಮಾಜಿ ಸಚಿವ ಅಭಯಚಂದ್ರ ಜೈನ್ ಮತ್ತು ಮಿಥುನ್ ರೈ ಪತ್ರಿಕಾಗೋಷ್ಠಿಯಲ್ಲಿ ತಪ್ಪು ಹೇಳಿಕೆ ನೀಡಿ ಕೀಳು ಮಟ್ಟದ ರಾಜಕೀಯಕ್ಕೆ ಇಳಿದಿರುವುದು  ಖಂಡನೀಯ ಎಂದರು.

 2013ರಲ್ಲಿ ಆಸ್ಕರ್ ಪೆನಾಂಡೀಸ್ ಮುತುವರ್ಜಿಯಲ್ಲಿ ಹಾಕಿದ ಸುರತ್ಕಲ್ ಟೋಲ್ ಗೇಟ್ ಅನಗತ್ಯ ಎಂದು ಮನಗಂಡು ಈಗಿನ ಕೇಂದ್ರ ಸರ್ಕಾರ ತೆರವಿಗೆ ಪ್ರಕ್ರಿಯೆ ನಡೆಸುತ್ತಿರುವುದನ್ನು ಮನಗಂಡ ಕಾಂಗ್ರೆಸ್ ಮುಖಂಡರು ಟೋಲ್ ಗೇಟ್ ತೆರವಿಗೆ ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ ಕಿಡಿಕಾರಿದರು.

Post a Comment

0 Comments

Advertisement