ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲು ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಅವರು ಶ್ರೀಘ್ರ ಗುಣಮುಖರಾಗಲೆಂದು ನೂರ ಒಂದು ತೆಂಗಿನ ಕಾಯಿ ಹೊಡೆಯುವ ಮೂಲಕ ನಳಿನ್ ಕುಮಾರ್ ಕಟೀಲು ಅಭಿಮಾನಿಗಳ ಸಂಘ ಬೆಂಗಳೂರು ಇವರು ದೇವರ ಸನ್ನಿಧನದಲ್ಲಿ ಪ್ರಾರ್ಥನೆ ಯನ್ನು ಮಾಡಿದರು.
ಬೆಂಗಳೂರಿನ ಯಲಹಂಕದಲ್ಲಿ ಇರುವ ಕೊಡಪ್ಪ ಲೇಔಟ್ ಚೌಡೇಶ್ವರಿ ದೇವಸ್ಥಾನ ದಲ್ಲಿ ಈ ಕಾರ್ಯಕ್ರಮವನ್ನು ನಡೆಸಿದ್ದು ನೂರ ಒಂದು ತೆಂಗಿನ ಕಾಯಿ ಹೊಡೆದು ನಂತರ ಸಾರ್ವಜನಿಕ ರಿಗೆ ಅನ್ನ ಸಂತರ್ಪಣೆಯನ್ನು ನೆರವರಿಸಿದರು.
ಈ ಕಾರ್ಯಕ್ರಮ ದಲ್ಲಿ ಸುಮಾರು 500ರಕ್ಕೂ ಅಧಿಕ ನಳಿನ್ ಕುಮಾರ್ ಕಟೀಲು ಅವರ ಅಭಿಮಾನಿಗಳು ಉಪಸ್ಥಿತರಿದ್ದು ಸಾರ್ವಜನಿಕರಿಗೆ ಅನ್ನ ಪ್ರಸಾದವನ್ನು ಹಂಚಿದರು.
ಈ ಬಗ್ಗೆ ಮಾಹಿತಿ ನೀಡಿದ ನಳಿನ್ ಕುಮಾರ್ ಕಟೀಲು ಅಭಿಮಾನಿಗಳ ಸಂಘದ ಪ್ರಮುಖರು ನಳಿನ್ ಕುಮಾರ್ ಕಟೀಲು ಅವರು ಶ್ರೀಘ್ರ ಗುಣಮುಖರಾಗಿ ಮತ್ತೆ ಪಕ್ಷ ಸಂಘಟನೆ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಳ್ಳಲಿ ಎಂಬ ಆಶಯ ನಮ್ಮದಾಗಿದೆ. ನಾವು ಚೌಡೇಶ್ವರಿ ದೇವಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇವೆ. ಅವರಿಗೆ ಒಳ್ಳೆಯದಾಗಲಿ ಎಂದು ಅವರ ಹೆಸರಿನಲ್ಲಿ ನೂರ ಒಂದು ತೆಂಗಿನ ಕಾಯಿ ಹೊಡೆದು ಅನ್ನದಾನ ಮಾಡುತ್ತಿದ್ದೇವೆ ಎಂದು ಹೇಳಿದರು.
0 Comments