ನವಮೈತ್ರಿ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ 3ನೇ ಶಾಖೆ ಅಳದಂಗಡಿಯಲ್ಲಿ ಪ್ರಾರಂಭ

ಜಾಹೀರಾತು/Advertisment
ಜಾಹೀರಾತು/Advertisment

 

ನವಮೈತ್ರಿ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘ ಶಿರ್ತಾಡಿ ಇದರ 3ನೇ ಶಾಖೆಯು ಅಳದಂಗಡಿಯ ಜ್ಯೋತಿ ಕಾಂಪ್ಲೆಕ್ಸ್‌ನಲ್ಲಿ ಇಂದು ಉದ್ಘಾಟನೆಗೊಂಡಿತು.

ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರವರು ದೀಪ ಬೆಳಗಿಸಿ ಉದ್ಘಾಟನೆಯನ್ನು ನೆರವೇರಿಸಿದರು.

ಸಹಕಾರಿ ಸಂಘಗಳಿಂದಾಗಿ ಗ್ರಾಮೀಣ ಜನರು ಆರ್ಥಿಕ ಸದೃಢತೆ ಕಾಣುವಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಅಳದಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸೌಮ್ಯ ಹರಿಪ್ರಸಾದ್, ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿಯ ಹಿರಿಯ ವ್ಯವಸ್ಥಾಪಕ ಗುರುಪ್ರಸಾದ್ ಬಂಗೇರ, ಜ್ಯೋತಿ ಕಾಂಪ್ಲೆಕ್ಸ್‌ನ ಮಾಲಕಿ ಜ್ಯೋತಿ ಬಾಲಕೃಷ್ಣ ಶೆಟ್ಟಿ, ಮಾತೃಭೂಮಿ ಸೌಹಾರ್ದ ಸಹಕಾರಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೃಷ್ಣ ಕೊಂಪದವು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಘದಲ್ಲಿ ಠೇವಣಿ ತೊಡಗಿಸಿಕೊಂಡಿರುವ ಗ್ರಾಹಕರಾದ ಮೋಹನ್ ಕುಮಾರ್ ಜೈನ್ ಹಾಗೂ ಹೆರಾಲ್ಡ್ ರೋಡ್ರಿಗಸ್‌ರಿಗೆ ಠೇವಣಿ ಪತ್ರವನ್ನು ಹಸ್ತಾಂತರಿಸಲಾಯಿತು.

ನವಮೈತ್ರಿ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ವಿ. ಶೆಟ್ಟಿ, ಉಪಾಧ್ಯಕ್ಷ ವಿನಯ ಹೆಗ್ಡೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸಂದೀಪ್ ಜೆ.ಕೆ., ನಿರ್ದೇಶಕರಾದ ಮಹಾವೀರ ಜೈನ್, ಎಸ್. ಪ್ರವೀಣ್ ಕುಮಾರ್, ಮಹಾವೀರ ಮುದ್ಯ, ಫ್ರಾಂಕಿ ಎಲ್. ಪಿಂಟೋ, ರಕ್ಷಿತ್ ಆರ್., ಲ್ಯಾನ್ಸಿ ಡೇಸಾ, ಸದಾನಂದ ಪೂಜಾರಿ, ಬಬಿತಾ ಆರ್ ಶೆಟ್ಟಿ, ಶಾರದ ಸುವರ್ಣ, ನಾರಾವಿ ಶಾಖಾ ವ್ಯವಸ್ಥಾಪಕ ಸತೀಶ್, ಅಳದಂಗಡಿ ಶಾಖಾ ವ್ಯವಸ್ಥಾಪಕ ಪ್ರಜ್ವಲ್ ಜೈನ್ ಭಾಗವಹಿಸಿದ್ದರು.

ಪತ್ರಕರ್ತ ನವೀನ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.ನವಮೈತ್ರಿ ಸಹಕಾರಿ ಸಂಘವು 6450 ಸದಸ್ಯರನ್ನೊಳಗೊಂಡು 11.15ಕೋಟಿ ರೂ. ಠೇವಣಿ ಹೊಂದಿದೆ. 12.64ಕೋಟಿ ರೂ. ದುಡಿಯುವ ಬಂಡವಾಳ ಹೊಂದಿರುವ ಬ್ಯಾಂಕ್ ಸುಮಾರು 81.72 ಕೋಟಿ ಒಟ್ಟಾರೆ ವ್ಯವಹಾರ ಕಂಡಿದೆ.

ಸಭಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ಪೂಜಾ ವಿಧಿವಿಧಾನ ನೆರವೇರಿಸಲಾಯಿತು.

Post a Comment

0 Comments