ಮೂಡುಬಿದಿರೆ: ಬದುಕಿನ ಬೇರೆ ಬೇರೆ ಹಂತದಲ್ಲಿ ಸೋಲು- ಗೆಲುವು ಎರಡೂ ಇದೆ. ಸೋಲಿನ ಅನುಭವದಿಂದ ಮತ್ತೆ ಮತ್ತೆ ಹೊಸ ಸೋಲುಗಳು ನಮ್ಮನ್ನು ಗಟ್ಟಿಗೊಳಿಸುತ್ತವೆ ಮತ್ತು ಸೋಲೇ ನಮ್ಮನ್ನು ಗೆಲುವಿನ ಮೆಟ್ಟಿಲಾಗಿ ಪರಿವರ್ತಿಸುತ್ತದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಹೇಳಿದರು. ಅವರು ದಶಮದ ಸಂಭ್ರಮದಲ್ಲಿರುವ ಕಲ್ಲಬೆಟ್ಟು ಎಕ್ಸಲೆಂಟ್ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಯಾವ ಮನುಷ್ಯನೂ ಪರಿಪೂರ್ಣನಲ್ಲ.ಎಲ್ಲರಲ್ಲೂ ಒಂದೊಂದು ರೀತಿಯ ಕೊರತೆಗಳಿರುತ್ತವೆ. ಈ ಕೊರತೆಗಳನ್ನು ವಿದ್ಯಾರ್ಥಿಗಳು ಮೆಟ್ಟಿ ನಿಲ್ಲಬೇಕು. ನಿತ್ಯದ ಬದುಕಿನಲ್ಲಿ ಸೃಜನಶೀಲತೆಯನ್ನು ಹೆಚ್ಚಿಸಿಕೊಳ್ಳಬೇಕು. ನಿಮ್ಮಲ್ಲಿ ಬೇರೆ ಬೇರೆ ರೀತಿಯ ಪ್ರತಿಭೆಗಳಿರುತ್ತವೆ. ಮುಂದಿನ ದಿನಗಳಲ್ಲಿ ನಿಮ್ಮಲ್ಲೂ ಒಬ್ಬ ಚಿತ್ರನಟ,ಸಾಹಿತಿ, ರಾಜಕರಣಿ, ನಿರ್ದೇಶಕ ಆಗಬಹುದು. ವಿದ್ಯಾರ್ಥಿಗಳು ಪ್ರಶ್ನಿಸುವ ಗುಣವನ್ನು ಬೆಳೆಸಿಕೊಳ್ಳಬೇಕೆಂದ ಅವರು ಹೆತ್ತವರ, ಗುರುಗಳ ಹಾಗೂ ಶಿಕ್ಷಣ ಸಂಸ್ಥೆಯ ಋಣವನ್ನು ತೀರಿಸುವಂತಹ ಗುಣವನ್ನು ನೀವು ಮೈಗೂಡಿಸಿಕೊಳ್ಳಿ ಎಂದರು.
ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ
ಇದೇ ಸಂದರ್ಭದಲ್ಲಿ ಸಂಸ್ಥೆಯ ಪರವಾಗಿ ಪಿ.ಶೇಷಾದ್ರಿ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್, ಉಜಿರೆ ಎಸ್ ಡಿಎಂ ಸಂಸ್ಥೆಯ ನಿವೃತ್ತ ಕನ್ನಡ ಉಪನ್ಯಾಸಕ ಡಾ.ಸಂಪತ್ ಕುಮಾರ್, ಪ್ರೊ.ಪದ್ಮನಾಭ ಕೆ.ಎನ್., ಎಕ್ಸಲೆಂಟ್ ಸಂಸ್ಥೆಯ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಪ್ರೌಢಶಾಲಾ ಮುಖ್ಯ ಶಿಕ್ಷಕ ಶಿವ ಪ್ರಸಾದ್ ಈ ಸಂದರ್ಭದಲ್ಲಿದ್ದರು.
ಡಾ.ವಾದಿರಾಜ ಕಲ್ಲೂರಾಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
0 Comments