ಬನ್ನಡ್ಕ ಶಾರದೋತ್ಸವ ಸಮಿತಿಯಿಂದ ಡಾ ಎಂ ಎನ್ ರಾಜೇಂದ್ರ ಕುಮಾರ್ ಅವರಿಗೆ ಸನ್ಮಾನ

ಜಾಹೀರಾತು/Advertisment
ಜಾಹೀರಾತು/Advertisment

 

ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಲದ ಅಧ್ಯಕ್ಷರಾಗಿ ಪುನರಾಯ್ಕೆಯಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಸಮ್ಮಾನ ಮೂಡುಬಿದಿರೆ ಪಡುಮಾರ್ನಾಡು ಗ್ರಾಮದ ಬನ್ನಡ್ಕತ್ತಾಯ ದೈವಸ್ಥಾನದ ಆವರಣದಲ್ಲಿ ಪ್ರಥಮ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಸಂದರ್ಭದಲ್ಲಿ ಜರಗಿತು.

ಸಮಿತಿ ಗೌರವಾಧ್ಯಕ್ಷ ಶಾಸಕ ಉಮಾನಾಥ ಕೋಟ್ಯಾನ್, ಅಧ್ಯಕ್ಷ ಎಂ. ದಯಾನಂದ ಪೈ, ವಿ.ಹಿಂ.ಪ. ಅಧ್ಯಕ್ಷ ಕೆ. ವಿಶ್ವನಾಥ ಪ್ರಭು, ಕೃಷ್ಣರಾಜ ಹೆಗ್ಡೆ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಸುಕೇಶ್ ಶೆಟ್ಟಿ ಸಹಿತ ಗಣ್ಯರ ಉಪಸ್ಥಿತಿಯಲ್ಲಿ ವಿಗ್ರಹ ಪ್ರತಿಷ್ಠೆ, ಸೂರ್ಯಪ್ರದಾ-ಮಂಜುನಾಥ ಕಾಮತ್ ನವದೆಹಲಿ ಇವರಿಂದ ಧ್ವಜಾರೋಹಣ, ದುರ್ಗಾ ಹೋಮ, ಮಹಾಪೂಜೆಯಾಗಿ ಅನ್ನ ಸಂತರ್ಪಣೆ, ಮಧ್ಯಾಹ್ನ ಮುದ್ದು ಶಾರದೆ, ಭಕ್ತಿಗೀತೆ ಸ್ಪರ್ಧೆ ನಡೆದವು.

ಬೆಳುವಾಯಿ ಸಿಎ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್, ನೂತನ ಪ್ರಬಂಧಕ ರಾಘವೇಂದ್ರ ಭಟ್, ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಶಾರದೋತ್ಸವ ಸಮಿತಿ ಅಧ್ಯಕ್ಷ ದಯಾನಂದ ಪೈ, ಕುಲದೀಪ ಚೌಟರ ಆರಮನೆ, ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಸಮಿತಿಯ ಕಾರ್ಯದರ್ಶಿ ಸೂರಜ್ ಜೈನ್ ಮಾರ್ನಾಡು, ಧರಣೇಂದ್ರ ಕುಮಾರ್ ಜೈನ್, ಅರ್ಚಕ ಅನಂತ ಆಸ್ರಣ್ಣ ಪಡುಮಾರ್ನಾಡು, ಸಮಿತಿ ಪದಾಧಿಕಾರಿಗಳಿದ್ದರು. ಧಾರ್ಮಿಕ ಸಭೆಯಲ್ಲಿ ಉಪನ್ಯಾಸಕ ಕಾರ್ಕಳದ ಅಕ್ಷಯಾ ಗೋಖಲೆ ಇವರು ಧಾರ್ಮಿಕ ಉಪನ್ಯಾಸವಿತ್ತರು. ರಾತ್ರಿ ಶೋಭಾಯಾತ್ರೆ ನಡೆದು ಕಡಲಕೆರೆಯಲ್ಲಿ ವಿಗ್ರಹ ವಿಸರ್ಜಿಸಲಾಯಿತು.

Post a Comment

0 Comments