
ಮೂಡುಬಿದಿರೆ: ಯಕ್ಷೋಪಾಸನಂ - ಮೂಡುಬಿದಿರೆ ಇದರ ದಶಮಾನೋತ್ಸವ ಸಂಭ್ರಮದಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇದರ ಪ್ರಾಯೋಜಕತ್ವದಲ್ಲಿ ಅ.8ರಂದು ಮಧ್ಯಾಹ್ನ 2.00 ಗಂಟೆಗೆ ಸಮಾಜ ಮಂದಿರದಲ್ಲಿ ತಾಳಮದ್ದಳೆ ಕಾರ್ಯಕ್ರಮವು ನಡೆಯಲಿದೆ ಎಂದು ಯಕ್ಷೋಪಾಸನಂನ ಅಧ್ಯಕ್ಷ ಶಾಂತಾರಾಮ ಕುಡ್ವ ತಿಳಿಸಿದರು.
ಅವರು ಗುರುವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಮಧ್ಯಾಹ್ನ 2 ಗಂಟೆಗೆ ಯಕ್ಷೋಪಾಸನಂನ ಸದಸ್ಯರಿಂದ ತಾಳಮದ್ದಳೆ (ಶ್ರೀರಂಗ ತುಲಾಭಾರ), ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜೈನಮಠದ ಡಾ.ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ.
ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಉದ್ಯಮಿಗಳಾದ ಕೆ.ಶ್ರೀಪತಿ ಭಟ್, ಕೆ.ಪ್ರೇಮನಾಥ ಮಾರ್ಲ, ನೀಲೇಶ್ ಶೆಟ್ಟಿ, ಪುನೀತ್ ಕಟ್ಟೆಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ ಸುಪ್ರಸಿದ್ಧ ಕಲಾವಿದರಿಂದ ತಾಳಮದ್ದಳೆ "ಕರ್ಣಾರ್ಜುನ" ನಡೆಯಲಿದೆ ಎಂದರು.
ಸಂಚಾಲಕ ವೆಂಕಟರಮಣ ಕೆರೆಗದ್ದೆ, ಕೋಶಾಧಿಕಾರಿ ಬಾಲಕೃಷ್ಣ ಭಟ್, ಕಲಾವಿದ ಸುನಿಲ್ ಹೊಲಾಡು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


0 Comments