ಮೂಡುಬಿದಿರೆ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಸೇವಾ ಪಾಕ್ಷಿಕದ ಅಂಗವಾಗಿ ಬಿಜೆಪಿ ಮಂಡಲದ ವತಿಯಿಂದ ಮೋದಿ ಸರಕಾರದ ಜನಪರ ಯೋಜನೆಗಳನ್ನು ಮನೆ-ಮನೆಗೆ ತಲುಪಿಸುವ ಪ್ರದರ್ಶಿನಿ ಸಂಚಾರಿ ವಾಹನಕ್ಕೆ ಶಾಸಕ ಉಮಾನಾಥ್ ಕೋಟ್ಯಾನ್ ಶನಿವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಕೊಟ್ಟಂತಹ ಯೋಜನೆಗಳು ಮತ್ತು ಜನರಿಗೆ ನೀಡಿದ ಅನೇಕ ವ್ಯವಸ್ಥೆಗಳನ್ನು ಪ್ರಧಾನಿಯವರ ಜನ್ಮದಿನದ ಅಂಗವಾಗಿ 15 ದಿನಗಳ ಕಾಲ ಜನರಿಗೆ ಮಾಹಿತಿಯನ್ನು ನೀಡುವಂತಹ ಪ್ರದರ್ಶಿನಿ ಸಂಚಾರಿ ವಾಹನಕ್ಕೆ ಚಾಲನೆಯನ್ನು ನೀಡಿಲಾಗಿದೆ ಪ್ರಧಾನಿ ಮೋದಿಯವರು 8 ವರ್ಷದಲ್ಲಿ ಜನರಿಗೆ ನೀಡಿದ ಯೋಜನೆಗಳು ಜನರ ಮನಸಿನಲ್ಲಿ ಅಳಿಯಬಾರದೆಂಬ ಉದ್ದೇಶದಿಂದ ಜನರಿಗೆ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಸುನೀಲ್ ಆಳ್ವ, ಎಮ್.ಸಿ.ಎಸ್ ಬ್ಯಾಂಕಿನ ಅಧ್ಯಕ್ಷ ಬಾಹುಬಲಿ ಪ್ರಸಾದ್, ಜಿಲ್ಲಾ ಪಂಚಾಯತ್ ನ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ಪೂಜಾರಿ, ಪುರಸಭಾ ಸದಸ್ಯರುಗಳಾದ ಸೌಮ್ಯ ಸಂದೀಪ್ ಶೆಟ್ಟಿ, ಶ್ವೇತಾ ಪ್ರವೀಣ್, ಬಿಜೆಪಿಯ ಮುಖಂಡರುಗಳಾದ ಲಕ್ಷ್ಮಣ್ ಪೂಜಾರಿ, ಗೋಪಾಲ್ ಶೆಟ್ಟಿಗಾರ್, ಅಜೇಯ್ ರೈ, ದಿವ್ಯವರ್ಮ ಜೈನ್, ಮತ್ತಿತರರು ಉಪಸ್ಥಿತರಿದ್ದರು.
0 Comments