ಮೂಡುಬಿದಿರೆ: ಇಲ್ಲಿನ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪಡುಬೆಟ್ಟು ಪೆಲತ್ತಡ್ಕ ಮತ್ತು ಕಾಯರ್ ಬೆಟ್ಟು ರಸ್ತೆಯನ್ನು ಶಾಸಕ ಉಮಾನಾಥ್ ಕೋಟ್ಯಾನ್ ಶನಿವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಪುತ್ತಿಗೆ ಗ್ರಾಮ ಪಂಚಾಯತ್ ಗೆ ಒಳಪಟ್ಟಂತಹ ರಸ್ತೆಗೆ ಕಾಂಕ್ರಿಟೀಕರಣ ರಸ್ತೆಯನ್ನಾಗಿ ಮಾಡಿ ಲೋಕಾರ್ಪಣೆಗೊಳಿಸಲಾಗಿದ್ದು, ಈ ಭಾಗದ ಜನರ ಬಹುವರ್ಷದ ಕನಸನ್ನು ನನಸುಗೊಳಿಸಲಾಗಿದೆ ಎಂದು ಹೇಳಿದರು.
ಅದಲ್ಲದೇ ಇನ್ನೂ ಮುಂದಿನ ಕೆಲವೇ ದಿನಗಳಲ್ಲಿ ೪೬ ಕೋಟಿ ವೆಚ್ಚದಲ್ಲಿ ಟೆಂಡರು ಮಾಡಲಾಗಿದ್ದು, ಕ್ಷೇತ್ರದ ಎಲ್ಲಾ ಒಳರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಒಟ್ಟು ಅನುದಾನಗಳಲ್ಲಿ ಅಭಿವೃದ್ಧಿ ಕೆಲಸದಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಓ.ಬಿ.ಸಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ರಾಮಣ್ಣ ಮುಗ್ರೋಡಿ, ಕಾರ್ಯನಿರ್ವಾಹಕ ಇಂಜಿನಿಯರ್ ಜಗದೀಶ್ ಸೆಟ್, ಪುತ್ತಿಗೆ ಪಂಚಾಯತ್ ಸದಸ್ಯರುಗಳಾದ ದಯಾನಂದ್, ಸುಮ ಭಟ್, ಸಾರಿಕಾ, ಅಪ್ಪಿ, ದಿನೇಶ್ ಗೌಡ, ಹೇಮಾವತಿ, ವಾಸು ಗೌಡ ಹಾಗೂ ಮಾಜಿ ಪಂಚಾಯತ್ ಸದಸ್ಯರುಗಳಾದ ನಾಗರಾಜ್ ಕರ್ಕೆರ, ಶಶಿಧರ್ ಅಂಚನ್, ಶಶಿಧರ್ ನಾಯಕ್, ನಾಗವರ್ಮ ಜೈನ್, ಗಿರೀಶ್ ಹಂಡೇಲು, ಶಂಕರಮೂರ್ತಿ, ಶಶಿಕಲಾ ರಾವ್, ಪುರಸಭಾ ನಾಮ ನಿರ್ದೇಶಿತ ಸದಸ್ಯ ಅಜಯ್ ರೈ ಪುತ್ತಿಗೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕಿಶೋರ್ ಕುಮಾರ್ ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು.
0 Comments