ಮಂಗಳೂರು: ಫ್ರೀಡಂ ಕಮ್ಯುನಿಟಿ ಹಾಲ್‌ನಲ್ಲಿ ಪಿಎಫ್‌ಐ ಸಂಘಟನೆಯು ತನ್ನ ಕಾರ್ಯಕರ್ತರಿಗೆ ಉಗ್ರ
ಚಟಿವಟಿಕೆಗಳನ್ನು ನಡೆಸುವ ಸಲುವಾಗಿ ತರಬೇತಿ ನೀಡುತ್ತಿತ್ತು ಎನ್ನುವ ಎನ್‌ಐಎ ಪೊಲೀಸರ ತನಿಖೆಯ ಆಧಾರದಲ್ಲಿ ಈ ಸಭಾಂಗಣವನ್ನು ಸೀಜ್ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಬಂಟ್ವಾಳ ತಾಲೂಕಿನ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯುನಿಟಿ ಸಭಾಂಗಣವನ್ನು ಸೀಜ್ ಮಾಡಲು ವಿಟ್ಲ ಉಪ ತಹಶೀಲ್ದಾರ್‌ಗೆ ಸೂಚನೆ ನೀಡಲಾಗಿದೆ.ಕಳೆದ ಹಲವು ಸಮಯದಿಂದ ಇಲ್ಲಿ ಪಿಏಪ್‌ಐ ಕಾರ್ಯಕರ್ತರಿಗೆ ರಹಸ್ಯವಾಗಿ ತರಬೇತಿ ನೀಡಲಾಗುತ್ತಿತ್ತು ಪ್ರಮುಖವಾಗಿ ಹಿಂದೂ ಕಾರ್ಯಕರ್ತರ ಹತ್ಯೆ, ಪೊಲೀಸರಿಂದ ತಪ್ಪಿಸಿಕೊಳ್ಳುವ ವಿಚಾರದ ಕುರಿತು ಸಮಗ್ರ ತರಬೇತಿ ನೀಡಲಾಗುತ್ತಿತ್ತು ಎನ್ನಲಾಗಿದೆ.
ಎನ್‌ಐಎ ಸುಧೀರ್ಘ ಸಮಯದಿಂದ ಪಿಎಫ್‌ಯ ವಿರುದ್ಧ ಸಾಕಷ್ಟು ಪ್ರಬಲ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಬಳಿಕ ದೇಶದಾದ್ಯಂತ ಏಕಕಾಕದಲ್ಲಿ ಪಿಎಫ್‌ಐ ಕಚೇರಿಗೆ ಹಾಗೂ ಮುಖಂಡರ ಮನೆಗಳಿಗೆ ಮುಗಿಬಿದ್ದು ಕಂಬಿಹಿಂದೆ ತಳ್ಳಿದೆ. ಇದೀಗ ಫ್ರೀಂ ಕಮ್ಯುನಿಟಿ ಹಾಲ್ ಸೀಜ್ ಮಾಡುವ ಮೂಲಕ ಪಿಎಫ್‌ಐಗೆ ಭಾರೀ ಹೊಡೆತ ಬಿದ್ದಂತಾಗಿದೆ.
0 Comments