ಮೂಡುಬಿದಿರೆ ಪರಿಸರದಲ್ಲಿ ಗೋವುಗಳ ಕಳ್ಳತನ, ಕೃಷಿಕರ ಹಟ್ಟಿಯಿಂದ ಸೇರಿದಂತೆ ಸಾರ್ವಜನಿಕ ಪ್ರದೇಶದಿಂದ ನಿರಂತರವಾಗಿ ನಡೆಯುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಹಿಂದು ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು ವತಿಯಿಂದ ಮೂಡುಬಿದಿರೆ ಠಾಣಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.
ಪುತ್ತಿಗೆ ಪರಿಸರದಿಂದ ಈಗಾಗಲೇ ೪೦ಕ್ಕೂ ಅಧಿಕ ದನಗಳ ಕಳ್ಳತನ ನಡೆದಿದೆ. ಕೆಲವೊಂದು ಪ್ರದೇಶಗಳಲ್ಲಿ ಅಕ್ರಮವಾಗಿ ಕಸಾಯಿಖಾನೆಗಳನ್ನು ನಿರ್ಮಿಸಿ ಗೋವುಗಳನ್ನು ಸಾಯಿಸಲಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಆರೋಪಿಗಳನ್ನು ಪತ್ತೆಹಚ್ಚಿ ಗೂಂಡಾ ಕಾಯಿದೆಯಡಿ ಪ್ರಕರಣ ದಾಖಲಿಸುವಂತೆ ಅವರು ಒತ್ತಾಯಿಸಿದ್ದಾರೆ.
ಹಿಂದು ಜಾಗರಣ ವೇದಿಕೆಯ ಸಂಯೋಜಕ ಸಂದೀಪ್ ಹೆಗ್ಡೆ, ಜಿಲ್ಲಾ ಸಹ ಸಂಯೋಜಕ್ ಸಮಿತ್‌ರಾಜ್ ದರೆಗುಡ್ಡೆ, ತಾಲೂಕು ಹಿಂದು ಯುವವಾಹಿನಿ ಪ್ರಮುಖ್ ನಾಗೇಂದ್ರ ಭಂಡಾರಿ, ನಗರ ಸಂಯೋಜಕ್ ಶರತ್ ಮಿಜಾರು, ಪ್ರಮುಖರಾದ ಸುನಿಲ್ ನಂದೊಟ್ಟು, ಸದಾನಂದ ಶೆಟ್ಟಿ, ಸಂದೀಪ್ ಕೋಟ್ಯಾನ್ ಮತ್ತಿತರರು ಮನವಿ ಸಲ್ಲಿಕೆ ಸಂದರ್ಭ ಹಾಜರಿದ್ದರು.
0 Comments