ಬ್ರೇಕಿಂಗ್: ಸುಪ್ರೀಂ ಕೋರ್ಟ್ ಅಂಗಳದಲ್ಲಿ ಹಿಜಾಬ್ ವಿವಾದ:ಭಿನ್ನ ತೀರ್ಪು ನೀಡಿದ ನ್ಯಾಯಾಧೀಶರು

 


ಕರ್ನಾಟಕದ ಉಡುಪಿಯಲ್ಲಿ ಕೂಗೆದ್ದ ಹಿಜಾಬ್ ವಿವಾದ ಈಗ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಚರ್ಚೆಯಲ್ಲಿದ್ದು   ತೀರ್ಪು ಪ್ರಕಟವಾಗಿದೆ. ದ್ವಿಸದಸ್ಯ ಪೀಠ ದಿಂದ ತೀರ್ಪು ಪ್ರಕಟವಾಗಿದ್ದು  ಒಬ್ಬ ನ್ಯಾಯಮೂರ್ತಿಗಳು  ಕರ್ನಾಟಕದ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದು ಹಿಜಾಬ್ ಧರಿಸಲು ಅವಕಾಶ ನಿರಾಕರಿಸಿದ್ದರೆ ಮತ್ತೊಬ್ಬ ನ್ಯಾಯಾಧೀಶರು ಹಿಜಾಬ್ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ ಆದೇಶಿಸಿದ್ದಾರೆ.


ಹೀಗಾಗಿ ಮತ್ತೆ ದ್ವಂದ್ವದಲ್ಲಿ ಸಿಲುಕಿರುವ ಹಿಜಾಬ್ ವಿವಾದವು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆಗೊಂಡಿದೆ. ಹೀಗಾಗಿ ಸದ್ಯ ಕರ್ನಾಟಕದ ವಿಧಾನಸಭೆ ಎಲ್ಲಾ ಕಡೆಗಳಲ್ಲಿ ಹಿಜಾಬ್ ಕಾಯಿದೆ ಯಥಾಸ್ಥಿತಿ ಮುಂದುವರಿಸಲಾಗುವುದು ಎಂದು ದೇಶದಲ್ಲಿ ಹೊರಡಿಸಲಾಗಿದೆ. ಮಾತ್ರವಲ್ಲದೆ ಈ ಹಿಂದೆ ಕರ್ನಾಟಕ ಹೈಕೋರ್ಟ್ ಮತ್ತು ಕರ್ನಾಟಕ ಸರ್ಕಾರ ಆದೇಶ  ನೀಡಿದಂತೆ ಯಾವುದೇ ಸರ್ಕಾರಿ ಶಾಲೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂಬ ಆದೇಶವನ್ನು ಮುಂದುವರಿಸಲು ಸೂಚಿಸಲಾಗಿದೆ.

Post a Comment

0 Comments