ಸಾವಿನಲ್ಲೂ ಸಾರ್ಥಕತೆ ಮೆರೆದ ಗೌರವ್

ಜಾಹೀರಾತು/Advertisment
ಜಾಹೀರಾತು/Advertisment

 

ಮಂಗಳೂರು:  ಶಿವನಗರ ಶಿವಾಜಿ ಕಟ್ಟೆಯ ಬಳಿ ಮಂಗಳವಾರ ಸಂಜೆ ಗೌರವ್.ಎ.ಎಸ್ ಎಂಬವರ ಬೈಕ್  ಅಪಘಾತಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ದುಃಖದ ನಡುವೆಯೂ ಗೌರವ್ ಹೆತ್ತವರು ಹಾಗೂ ಸಹೋದರರು ಗೌರವ್ ನ ಅಂಗಾಂಗ  ದಾನಗಳಿಗೆ ಮುಂದಾಗಿದ್ದು, ಝೀರೋ ಟ್ರಾಫಿಕ್ ನಲ್ಲಿ ಕೆ.ಎಂ.ಸಿ ಮತ್ತು ಎ.ಜೆ ಆಸ್ಪತ್ರೆಯ ನೇತೃತ್ವದಲ್ಲಿ ಆಂಬುಲೆನ್ಸ್ ಮೂಲಕ ಮೂರು ಕಡೆಗಳಿಗೆ ಸಾಗಲಿದೆ ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ.

ಗೌರವ್ , ಲತಾ ಎ.ಎಸ್ ಅವರ ಪ್ರಥಮ ಪುತ್ರರಾಗಿದ್ದು, ತಾಯಿ, ಸಹೋದರನನ್ನು ಆಗಲಿದ್ದಾರೆ. ಇತ್ತೀಚೆಗೆ ಉದ್ಯೋಗಕ್ಕೆ ಸೇರಿದ್ದ ಇವರು ಮನೆ ಜವಬ್ದಾರಿಯನ್ನು ಹೆಗಲಿಗೇರಿಸುವ ಮೊದಲೇ ಇಂತಹ ಅವಘಡ ಎದುರಾಗಿ ಕುಟುಂಬವು ಕಣ್ಣೀರಿಡುತ್ತಿದೆ.

Post a Comment

0 Comments