ಮೂಡುಬಿದಿರೆ: ಶ್ರೀ ಸತ್ಯನಾರಾಯಣ ದೇವಸ್ಥಾನ ಬೋರುಗುಡ್ಡೆ ಇಲ್ಲಿನ ಜೀರ್ಣೋದ್ಧಾರದ ಪ್ರಯುಕ್ತ ಕ್ಷೇತ್ರದಲ್ಲಿ ಪ್ರಶ್ನಾ ಚಿಂತನೆ ಕಾರ್ಯಕ್ರಮ ನಡೆಯಿತು. ಮಾಗಣೆ ಅಸ್ರಣ್ಣರಾದ ಶ್ರೀ ನಾಗರಾಜ ಭಟ್ ರವರ ನೇತೃತ್ವದಲ್ಲಿ ಕ್ಷೇತ್ರದ ತಂತ್ರಿಗಳಾದ ಶ್ರೀ ಸತ್ಯನಾರಾಯಣ ತಂತ್ರಿಯವರ ಮುಂದಾಳತ್ವದಲ್ಲಿ ಈ ಪ್ರಶ್ನಾ ಚಿಂತನ ಕಾರ್ಯಕ್ರಮ ನಡೆಯಿತು.
ಪಣಪಿಲ ಅರಮನೆಯ ಮುಖ್ಯಸ್ಥರಾದ ಶ್ರೀ ವಿಮಲ್ ಕುಮಾರ್ ಶೆಟ್ಟಿ, ಮಜಲೋಡಿ ಗುತ್ತು ಪ್ರಮೋದ್ ಆರಿಗ, ಬಿಜೆಪಿ ಮುಖಂಡ ಸುಕೇಶ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಪ್ರೇಮ್ ಕುಮಾರ್ ಜೈನ್, ಅಧ್ಯಕ್ಷರಾದ ರವೀಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ವಿಶ್ವನಾಥ ಕೋಟ್ಯಾನ್, ಆಡಳಿತ ಸಮಿತಿಯ ಅಧ್ಯಕ್ಷರಾದ ಉದಯ ಪೂಜಾರಿ, ಕಾರ್ಯದರ್ಶಿಗಳಾದ ರಮೇಶ್ ಮೂಡುಮನೆ ಹಿರಿಯರಾದ ಶಿವ ಎಲ್ ಪೂಜಾರಿ, ಪಿಜಿನ ಪೂಜಾರಿ, ಮುನಿರಾಜ್ ಹೆಗ್ಡೆ, ಜಯಂತ್ ಹೆಗ್ಡೆ, ಭುಜಂಗ ಹೆಗ್ಡೆ, ಹಾಗೂ ಇತರೆ ಪ್ರಮುಖರು ಉಪಸ್ಥಿತರಿದ್ದರು.
0 Comments