ಬಾ ತಾಂಟ್ ಎಂದವನಿಗೆ ತಾಂಟಿದ ಎನ್.ಐ.ಎ. ಅಧಿಕಾರಿಗಳು.! ಮಂಗಳೂರು SDPI ನಾಯಕನಿಗಿದೆಯಾ ಬಿಹಾರ ಬಾಂಬ್ ಸ್ಪೋಟದ ನಂಟು.?

ಜಾಹೀರಾತು/Advertisment
ಜಾಹೀರಾತು/Advertisment

 ಮಂಗಳೂರು ಎಸ್‌ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ ಅವರ ಮನೆಯ ಮೇಲೆ ಎನ್ ಐ ಎ ದಾಳಿ ನಡೆಸಿದೆ. ಎಸ್‌ಡಿಪಿಐ ಮುಖಂಡನಾದ ರಿಯಾಜ್ ಫರಂಗಿಪೇಟೆ ವಿರುದ್ಧ ಬಿಹಾರದಲ್ಲಿ ತನಿಖೆ ನಡೆಯುತ್ತಿದ್ದು ಈ ಹಿನ್ನಲೆಯಲ್ಲಿ ರಿಯಾಝ್ ಫರಂಗಿಪೇಟೆ ಆತನ ಮನೆಯ ಮೇಲೆ ಏನ್ ಐ ಎ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಿದ್ದಾರೆ. ಬಿಹಾರದಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಅಲ್ಲಿ ಬಂಧಿತರಾದ ಆರೋಪಿಗಳ ಜೊತೆಗೆ ರಿಯಾಝ್ ಫರಂಗಿಪೇಟೆ ಸಂಪರ್ಕದಲ್ಲಿದ್ದದ್ದು ತನಿಖೆಯಿಂದ ಬಯಲಾಗಿದೆ. ಈ ಹಿನ್ನಲೆಯಲ್ಲಿ ರಿಯಾಝ್ ಫರಂಗಿಪೇಟೆ ಮೇಲೆ ಎನ್ ಐ ಎ ದಾಳಿ ನಡೆಸಿದೆ ಎನ್ನಲಾಗಿದೆ. ಆರಂಭದಲ್ಲಿ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ ಎ ರಿಯಾಝ್ ಫರಂಗಿಪೇಟೆ ಮನೆಯ ಮೇಲೆ ದಾಳಿ ನಡೆಸಿತ್ತು ಎಂಬ ಚರ್ಚೆಗಳು ಆರಂಭವಾಗಿದ್ದಾದರೂ ನಂತರದ ಬೆಳವಣಿಗೆಯೊಂದರಲ್ಲಿ ಇದು ಬಿಹಾರದಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ನಡೆದ ದಾಳಿ ಎಂದು ಮಾಹಿತಿ ಲಭ್ಯವಾಗಿದೆ. ಸದ್ಯ ರಿಯಾಝ್ ಫರಂಗಿಪೇಟೆ ಮನೆಯ ಮೇಲೆ ನಡೆದ ದಾಳಿಯನ್ನು ಖಂಡಿಸಿ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

Post a Comment

0 Comments