ಮೂಡುಬಿದಿರೆ ಇಲ್ಲಿನ ಬೆಳುವಾಯಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ವನ್ನು ಸರಕಾರಿ ಪ್ರೌಢಶಾಲೆ ಮೂಡು ಮಾರ್ನಾಡು ವಿನಲ್ಲಿ ಉದ್ಘಾಟಿಸಿ ಶಾಸಕ ಉಮಾನಾಥ್ ಕೋಟ್ಯಾನ್ ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ವೇದಿಕೆ ಎಂದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್ ಡಿ ಎಮ್ ಸಿ ಅಧ್ಯಕ್ಷ ಭಾಸ್ಕರ್ ಎಸ್ ಕೋಟ್ಯಾನ್ ವಹಿಸಿದ್ದು ಕ್ಷೇತ್ರ ಶಿಕ್ಷಣಾಧಿಕಾರಿ ವೈ ಗಣೇಶ್ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ತಾಲೂಕು ಪ್ರತಿಭಾ ಕಾರಂಜಿ ನೋಡಲ್ ರಾಜೇಶ್ ಭಟ್ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಶೋಧರ ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕಿ ಜ್ಯೋತಿ ಡಿಸೋಜಾ ಶಿಕ್ಷಣ ಸಾರಥಿ ಪ್ರಸನ್ನ ವಿ ಶೆಣೈ , ಯಶೋಧರ , ಕಲಾವಿದೆ ಅಶ್ವಿನಿ ವಿಜಯ ಕೃಷ್ಣ, ದೈಹಿಕ ಶಿಕ್ಷಕ ನವೀನ್ ಆರ್ ಪುತ್ರನ್, ಕ್ರೀಡಾ ತರಬೇತುದಾರ ವಿಕ್ರಂ ಜೈ ನ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ವೈ ಗಣೇಶ್ ಅವರನ್ನು ಅಭಿನಂದಿಸಲಾಯಿತು, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಡಾಕ್ಟರ್ ಬಿ ರಾಜಶ್ರೀ ಸ್ವಾಗತಿಸಿದರು ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಸನ್ನ ವಿ ಶೆಣೈ ಪ್ರಾಸ್ತಾವಿಕ ಮಾತನಾಡಿದರು ಸಹ ಶಿಕ್ಷಕ ಜಾನ್ ರೊನಾಲ್ಡ್ ಕಾರ್ಯಕ್ರಮ ನಿರೂಪಿಸಿದರು ವಿಜ್ಞಾನ ಶಿಕ್ಷಕಿ ಸುಜಾತಶೆಟ್ಟಿ ವಂದಿಸಿದರು.
0 Comments