ಪ್ರಧಾನಿ ಜನ್ಮದಿನಾಚರಣೆ:ಪಣಪಿಲ ಬಿಜೆಪಿ ವತಿಯಿಂದ ಉಚಿತ ಆಭಾ ಕಾರ್ಡ್ ನೊಂದಣಿ ಶಿಬಿರ

ಜಾಹೀರಾತು/Advertisment
ಜಾಹೀರಾತು/Advertisment

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ 72ನೇ ಜನುಮ ದಿನದ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಪಣಪಿಲ ಸ್ಥಾನೀಯ ಸಮಿತಿಯ ವತಿಯಿಂದ ಆಭಾ ಕಾರ್ಡ್ ನೋಂದಣಿ ಶಿಬಿರವನ್ನು ಪಣಪಿಲ ಶಾಲಾ ವಠಾರದಲ್ಲಿ ನಡೆಸಲಾಯಿತು. ವರ್ಷದ ಪ್ರಾಕ್ಷಿಕ ಕಾರ್ಯಕ್ರಮದಡಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಸ್ಥಾನೀಯ ಸಮಿತಿಯ ವತಿಯಿಂದ ಈ ಕಾರ್ಯಕ್ರಮ ನಡೆಸಲಾಯಿತು.


ಸುಮಾರು 210 ಕ್ಕಿಂತಲೂ ಅಧಿಕ ಸಾರ್ವಜನಿಕರು ಈ ಸವಲತ್ತನ್ನು ಪಡೆದುಕೊಂಡರು. ಕಾರ್ಯಕ್ರಮವನ್ನು ದರೆಗುಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ತುಳಸಿ ಮೂಲ್ಯ ಇವರು ಉದ್ಘಾಟಿಸಿದ್ದು ಸದಸ್ಯರಾದ ದೀಕ್ಷಿತ್ ಪಣಪಿಲ, ಮುನಿರಾಜ್ ಹೆಗ್ಡೆ , ಜನಿತಾ ಹಾಗೂ ಇತರೆ ಪ್ರಮುಖರು ಉಪಸ್ಥಿತರಿದ್ದರು.


ಸ್ಥಾನೀಯ ಸಮಿತಿಯ ಅಧ್ಯಕ್ಷರಾದ ದೀಕ್ಷಿತ್ ಪಣಪಿಲ, ಪ್ರಧಾನ ಕಾರ್ಯದರ್ಶಿ ಸಚಿನ್ ಪಣಪಿಲ ಕಾರ್ಯಕ್ರಮವನ್ನು ನಿರ್ವಹಿಸಿದರು ಮತ್ತು ಬೋರುಗುಡ್ಡೆಯ ಪದ್ಮಿನಿ ಸೇವಾಕೇಂದ್ರದ ಚೇತನ್ ಬೋರುಗುಡ್ಡೆ ಇವರಿಂದ ಸಂಯೋಜಿಸಲ್ಪಟ್ಟಿತ್ತು.

 

Post a Comment

0 Comments