ಮೂಡುಬಿದಿರೆ: ಜೈನಕಾಶಿ ಮೂಡುಬಿದಿರೆಯ ಸರ್ವಮಂಗಳ ಜೈನ ಮಹಿಳಾ ಸಂಘದ ಸೆಪ್ಟಂಬರ್ ತಿಂಗಳ ಮಾಸಿಕ ಸಭೆಯನ್ನು ಭಾನುವಾರ ಪಡುಬಸದಿಯಲ್ಲಿ
ಅನಂತರಾಜ ಇಂದ್ರ ಮತ್ತು ಅವರ ಮಕ್ಕಳಾದ ಅರವಿಂದ ಇಂದ್ರ ಮತ್ತು ಧರ್ಮೆಂದ್ರ ಇಂದ್ರರವರ ಸಹಕಾರದೊಂದಿಗೆ, ಭಗವಾನ್ ಶ್ರೀ ವಿಮಲನಾಥ,ಶ್ರೀ ಅನಂತನಾಥ ಹಾಗೂ ಶ್ರೀ ಧರ್ಮನಾಥ ತೀರ್ಥಂಕರರಿಗೆ ಜಲಾಭೀಷೇಕ, ಕ್ಷಿರಾಭಿಷೇಕ ಹಾಗೂ ಅರ್ಘ್ಯ ಎತ್ತುವುದರ ಮೂಲಕ ಪ್ರಾರಂಭಿಸಲಾಯಿತು.
ನಂತರ ಸಭಾ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಮಠದ ರಮಾರಾಣಿ ಸಭಾಂಗಣದಲ್ಲಿ ನೆರವೇರಿಸಲಾಯಿತು.
ಸಭಾಕಾರ್ಯಕ್ರಮದಲ್ಲಿಶಿಕ್ಷಕರ ದಿನಾಚರಣೆ ಪ್ರಯುಕ್ತ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ
ಮಾಡಿದ ಸರ್ವಮಂಗಳದ ನಿವೃತ್ತ ಶಿಕ್ಷಕಿಯರಾದ ನಂದಿನಿ ಜ್ಞಾನಚಂದ್ರ, ಸುಮಂತ್ರ ಎನ್
ಇವರನ್ನು ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಗೌರಿ ನೋಂಪಿಯ
ಉದ್ಯಾಪನೆ ಮಾಡಿದ ಭಾರತಿ ಕಟ್ಟೇಮಾರ್ ಹಾಗೂ
ನೋಂಪಿಗಳ ರಾಜ ಎಂದೆನಿಸಿದ ಅನಂತನೋಂಪಿಯ
ಉದ್ಯಾಪನೆಯನ್ನು ಮಾಡಿದ ಭಾಗ್ಯ ವಜ್ರನಾಭ ಚೌಟರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸನ್ಮಾನಿತರ ಪತ್ರವನ್ನು
ಸೌಮ್ಯ ನಿರಂಜನ್, ಮಮತಾ ಪಾಂಡಿ, ಮಂಜುಳಾ ಅಭಯಚಂದ್ರ ಹಾಗೂ ಬಾಲಿಕಾ ಜಯಪ್ರಸಾದ್ ವಾಚಿಸಿದರು.
ಸೆಪ್ಟೆಂಬರ್ ತಿಂಗಳಲ್ಲಿಹುಟ್ಟಿದ ಸದಸ್ಯರ ಪಟ್ಟಿಯನ್ನು ಜಯಶ್ರೀಪುಷ್ಪರಾಜ್ ವಾಚಿಸಿದರು.ಸದಸ್ಯರು ದೀಪ ಬೆಳಗಿಸಿ ,ಪ್ರಸಿದ್ಧಜೈನ ಸಾಹಿತಿ ವೀಣಾ ರಘುಚಂದ್ರ ಶೆಟ್ಟಿಯವರು ರಚಿಸಿದಹಾಡನ್ನು ಹಾಡಲಾಯಿತು.ಹೊಸ ಸದಸ್ಯರ ಪಟ್ಟಿಯನ್ನು ಆರತಿ ಮಹಾವೀರ್ ವಾಚಿಸಿದರು.ಸನ್ಮಾನಿತರಲ್ಲಿ ಓರ್ವರಾದ ನಂದಿನಿ
ಜ್ಞಾನಚಂದ್ರ ಸಂಘಕ್ಕೆ ಹಾರೈಸಿ ಕೃತಜ್ಞತೆ ಸಲ್ಲಿಸಿದರು. ಸುಮಂತ್ರರವರು ಎನ್ ಮಾತನಾಡಿ ಡಾ|ಸರ್ವಪಲ್ಲಿ
ರಾಧಾಕೃಷ್ಣನ್ ಅವರ ಸರಳತೆ ,ಪ್ರಾಮಾಣಿಕತೆಯು ಪ್ರತೀ
ಶಿಕ್ಷಕರಿಗೆ ಮಾರ್ಗದರ್ಶನವಾಗಬೇಕು. ಮಾತೆಯರೆಲ್ಲಾ ಶಿಕ್ಷಕರೇ, ಸರ್ವಮಂಗಳ ಜೈನ ಮಹಿಳಾ ಸಂಘವು ಅತ್ಯುತ್ತಮ ನಾಯಕರನ್ನು ಹೊಂದಿದ್ದು ಸಂಘವು ದಿನದಿಂದ
ದಿನಕ್ಕೆ ಬೆಳೆಯುತ್ತದೆ ಎಂದು ತಿಳಿಸಿದರು.
0 Comments