ಶ್ರೀ ಸಿಂಚನ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆ

ಜಾಹೀರಾತು/Advertisment
ಜಾಹೀರಾತು/Advertisment

 

ಶ್ರೀ ಸಿಂಚನ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯು ಸೆ. 18ರಂದು ಸಹಕಾರಿಯ ಅಧ್ಯಕ್ಷರಾದ ಮೋಹನ್ ಪ್ರಭು ಕೆ. ಇವರ ಅಧ್ಯಕ್ಷತೆಯಲ್ಲಿ ಮೂಡುಬಿದರೆ ಸಮಾಜ ಮಂದಿರದ ಸ್ವರ್ಣ ಮಂದಿರದಲ್ಲಿ ಜರುಗಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಸಂಘದ ಸದಸ್ಯರು ತಮ್ಮ ಎಲ್ಲಾ ಆರ್ಥಿಕ ವ್ಯವಹಾರಗಳನ್ನು ನಮ್ಮ ಸೊಸೈಟಿ ಮೂಲಕ ನಡೆಸುವಂತೆ ಕೋರಿದರು.

ಠೇವಣಿಗಳನ್ನು ತೊಡಗಿಸಿ ಆಕರ್ಷಕ ಬಡ್ಡಿ ಪಡೆದುಕೊಳ್ಳುವಂತೆ ಅವರು ವಿನಂತಿಸಿದರು.

ಸಹಕಾರಿಯ ನಿರ್ದೇಶಕರುಗಳಾದ ಗೋಪಾಲ್ ಕೃಷ್ಣ ಕೆ., ರತ್ನಾಕರ ಎಂ. ಹೆಗ್ಡೆ, ಎಂ.ಕೆ. ದಿನೇಶ್, ಸುಭಾಶ್ಚಂದ್ರ ಎ. ಅಜ್ರಿ, ಶ್ರೀಮತಿ ಸಿಂಥಿಯಾ ಸಾಂಕ್ತಿಸ್, ಶ್ರೀಮತಿ ಶಾಲಿನಿ ಪ್ರಸಾದ್, ಬ್ರಿಜೇಶ್ ಯು., ಸಂತೋಷ್ ಕುಮಾರ್, ಲೆಕ್ಕಪರಿಶೋಧಕರಾದ ಶ್ರವಣ್ ಕುಮಾರ್ ಭಾಗವಹಿಸಿದ್ದರು.

ಸಹಕಾರಿಯು 3220 ಸದಸ್ಯರನ್ನು ಒಳಗೊಂಡು 10.60ಲಕ್ಷ ಪಾಲು ಬಂಡವಾಳ ಹೊಂದಿದೆ. ಒಟ್ಟು 8.36 ಕೋಟಿ ಠೇವಣಿ ಹೊಂದಿದ್ದು, 6.88ಕೋಟಿ ಸಾಲ ವಿತರಿಸಿದೆ.

79 ಸ್ವಸಹಾಯ ಗುಂಪುಗಳಲ್ಲಿ 43.63ಲಕ್ಷ ಉಳಿತಾಯ ಹೊಂದಿದ್ದು, 1.19ಕೋಟಿ ಸಾಲ ವಿತರಿಸಲಾಗಿದೆ.

ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸಂಗೀತಾ ಎಂ. ಕಾಮತ್ ವರದಿ ಮಂಡಿಸಿದರು. ಕುಮಾರಿ ಸಿಂಚನಾ ಪ್ರಾರ್ಥನೆಗೈದರು. ಸುಪ್ರೀತಾ, ಪ್ರವೀಣ್ ದಾಮೋದರ್ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments