ಮೂಡುಬಿದಿರೆ ಗಣೇಶೋತ್ಸವ ಸಂದರ್ಭದಲ್ಲಿ ವೇಷ ಧರಿಸಿ ಪುಟ್ಟ ಕಂದಮ್ಮ ಶ್ರೇಯಾಳ ಚಿಕಿತ್ಸೆಯ ವೆಚ್ಚಕ್ಕಾಗಿ ಮೂಡುಬಿದಿರೆಯ ಪ್ರತಿಷ್ಠಿತ ಜವನೆರ್ ಬೆದ್ರ ಯುವ ಸಂಘಟನೆಯ ವತಿಯಿಂದ ಧನ ಸಂಗ್ರಹಿಸಿ ಹಸ್ತಾಂತರಿಸಲಾಯಿತು.
ಜವನೆರ್ ಬೆದ್ರ ಯುವ ಸಂಘಟನೆ ಆಶ್ರಯದಲ್ಲಿ ಮೂಡುಬಿದಿರೆ ವಿದ್ಯಾರ್ಥಿಗಳಾದ ನಿಯುತ್ ತಂಡದ ಸದಸ್ಯರಾದ ತೇಜಸ್ ಧೀರಜ್ ಮುರುಳಿ ಸದಾಶಿವ ಕಿಶನ್ ರಕ್ಷಾ ಶ್ರೀವಿಕ ಹಾಗೂ ಯಕ್ಷಿತಾ ಎಂಬವರು ಮೂಡುಬಿದಿರೆಯ ಸ್ವರಾಜ್ಯ ಮೈದಾನದ ಬಳಿ ನಿವಾಸಿ ಕ್ಯಾನ್ಸರ್ ಪೀಡಿತ 1.5 ವರ್ಷದ ಮಗು ಶ್ರೇಯಾಳಿಗೆ ದಿನಾಂಕ 4 ಸೆಪ್ಟೆಂಬರ್ ರಂದು ಮೂಡಬಿದ್ರೆಯ ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ 5 ಯುವಕರು ವೇಷ ಧರಿಸುವ ಮುಖಾಂತರ , 1,03,542/- ಧನ ಸಂಗ್ರಹಿಸಿ ಶ್ರೇಯಾಳ ಕುಟುಂಬಕ್ಕೆ ಜವನೆರ್ ಬೆದ್ರದ ಕಚೇರಿಯಲ್ಲಿ ದಿನಾಂಕ 6 ರಂದು ವಿತರಿಸಿದರು.
ಜವನೆರ್ ಬೆದ್ರ ಸಂಘಟನೆಯ ಅಧ್ಯಕ್ಷರು ಅಮರ್ ಕೋಟೆ ಪ್ರಮುಖರುಗಳಾದ ನಾರಾಯಣ ಪಡುಮಲೆ, ಮನು ಆಚಾರ್ಯ ಹಾಗೂ ಸದಸ್ಯರ ಸಮ್ಮುಖದಲ್ಲಿ ನಿಯುತ್ ಸದಸ್ಯರು ಈ ಪರಿಹಾರ ಮೊತ್ತವಯ ಹಸ್ತಾಂತರಿಸಿದರು.
ಯಕ್ಷಗಾನ ವೇಷಧಾರಿ: ತೇಜಸ್,ಧೀರಜ್ ,ಕಿಶನ್ ,ಸದಾಶಿವ
ಹೆಲ್ಪ್ ಡೆಸ್ಕ್ :ರಕ್ಷಾ ,ಶ್ರೀವಿಕ, ಯಕ್ಷಿತಾ , ಮುರಳಿ
ಬಣ್ಣ ಹಾಗೂ ಸಹ :ಪೃಥ್ವಿಶಾ ,ಪ್ರದ್ಯುಮ್ನ ದತ್ತಾತ್ರಯ , ಕೀರ್ತನ್
ಚೇತನ್ ಶ್ರವಣ್ ಪ್ರತಿಮಾ.
0 Comments