ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜು ಕ್ಯಾಂಪಸ್‌ನಲ್ಲಿ ಕರ್ಕಾಟಕ ಬ್ಯಾಂಕ್‌ನ ೮೯೦ನೇ ಶಾಖೆಯನ್ನು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಜುಕೇಶನ್‌ನ ಅಧ್ಯಕ್ಷ ಡಾ.ಎಚ್.ಎಸ್ ಬಲ್ಲಾಳ್ ಗುರುವಾರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಕ್ರಾಂತಿಯಾಗಿದೆ. ಜಿಲ್ಲೆಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕರ್ಣಾಟಕ ಬ್ಯಾಂಕ್ ತನ್ನದೇ ಛಾಪು ಮೂಡಿಸಿದೆ. ಕರ್ಣಾಟಕ ಬ್ಯಾಂಕ್ ಹಣಕಾಸಿನ ವ್ಯವಹಾರದ ಜೊತೆಗೆ ಗ್ರಾಹಕರ ಸಂತೃಪ್ತಿಗೆ ಆದ್ಯತೆ ನೀಡಿದೆ ಎಂದರು. ಮಾಜಿ ಸಚಿವ, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಅಭಯಚಂದ್ರ ಮಿನಿ-ಇ-ಲಾಬಿಯನ್ನು ಉದ್ಘಾಟಿಸಿ, ಕೊರೊನ ಸಂಕಷ್ಟದ ಸಮಯದಲ್ಲೂ ಕರ್ಣಾಟಕ ಬ್ಯಾಂಕ್ ತನ್ನ ಗ್ರಾಹಕರಿಗೆ ನೆರವಾಗುವುದರ ಮೂಲಕ ವಿಶ್ವಾಸವನ್ನು ಹೆಚ್ಚಿಸಿದೆ. ಮಹಾವೀರ ಕಾಲೇಜಿನ ಆವರಣದಲ್ಲಿ ಪ್ರಾರಂಭವಾದ ಈ ಶಾಖೆಯಿಂದಾಗಿ ಕಾಲೇಜಿನ ಬೋಧಕರು, ವಿದ್ಯಾರ್ಥಿಗಳು, ಪರಿಸರದ ಜನರಿಗೆ ಮಾತ್ರವಲ್ಲ ಹೊಸಂಗಡಿ, ಪೆರಿಂಜೆ ಭಾಗದ ಜನರಿಗೂ ಅನುಕೂಲವಾಗುತ್ತದೆ ಎಂದರು.
ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಹಕರು ಬ್ಯಾಂಕಿನಲ್ಲಿ ಸಿಗುವ ಸೌಲಭ್ಯಗಳನ್ನು ದುರುಪಯೋಗಪಡಿಸದೆ ಆರ್ಥಿಕ ಶಿಸ್ತು ಅನುಸರಿಸಬೇಕು. ಸಾಲವನ್ನು ಸರಿಯಾದ ಸಮಯದಲ್ಲಿ ಪಾವತಿ ಮಾಡಿದರೆ ಬ್ಯಾಂಕ್‌ಗಳು ಸದೃಢಗೊಂದು ಭಾರತದ ಅರ್ಥವ್ಯವಸ್ಥೆ ಕೂಡ ಸುಸ್ಥಿತಿಯಲ್ಲಿರುತ್ತದೆ. ಗ್ರಾಮೀಣ, ಆರ ಗ್ರಾಮೀಣ ಪ್ರದೇಶದ ಗ್ರಾಹಕರನ್ನು ಒಳಗೊಂಡು ಕೃಷಿಕರು, ಸಣ್ಣ ವ್ಯಾಪಾರಸ್ಥರಿಂದ ಪ್ರಾರಂಭವಾದ ಜಿಲ್ಲೆಯ ಹೆಮ್ಮೆಯ ಬ್ಯಾಂಕ್ ಕಳೆದ ೯೮ ವರ್ಷಗಳಿಂದ ಲಾಭದಾಯಕವಾಗಿ ಗ್ರಾಹಕರ ಸೇವೆ ಮಾಡುತ್ತಿದೆ. ೧೯೨೦ರಲ್ಲಿ ಕರ್ಕಾಟಕ ಬ್ಯಾಂಕ್ ಗ್ರಾಮೀಣ ಪ್ರದೇಶದಲ್ಲಿ ಪ್ರಾರಂಭಗೊಂಡು ನಂತರದ ವರ್ಷಗಳಲ್ಲಿ ನಗರಗಳಲ್ಲಿಯೂ ಕಾರ್ಯಾಚರಿಸತೊಡಗಿತ್ತು, ಗ್ರಾಹಕಸ್ನೇಹಿ ಸೇವೆ, ಉತ್ತಮ ಗ್ರಾಹಕರ ಸಹಕಾರದಿಂದಾಗಿ ಶತಮಾನೋತ್ಸವ ಹೊಸ್ತಿಲಿನಲ್ಲಿದೆ, ಭಾರತೀಯ ಚಿಂತನೆಯ ಆರ್ಥಿಕ ಸ್ವತಂತ್ರ ಎನ್ನುವ ಮುಂದಾಲೋಚನೆಯಿಂದ ಪ್ರಾರಂಭವಾದ ಬ್ಯಾಂಕ್ ಇಂದು ತಂತ್ರಜ್ಞಾನಗಳ ಅಳವಡಿಕೆಯಲ್ಲೂ ಮುಂದಿದೆ. ತಂತ್ರಜ್ಞಾನಗಳಿದ್ದರೂ ಗ್ರಾಹಕರ ಜೊತೆಗಿದ್ದ ಉತ್ತಮ ನಂಟು ಕೂಡ ಬ್ಯಾಂಕ್‌ನ ಯಶಸ್ಸಿಗೆ ಕಾರಣ ಎಂದು ಹೇಳಿದರು.
ಬ್ಯಾಂಕ್ ನಿವೃತ ಮಹಾ ಪ್ರಬಂಧಕ ಚಂದ್ರಶೇಖರ ರಾವ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಉದ್ಯಮಿ ಕೆ.ಶ್ರೀಪತಿ ಭಟ್, ಶಿಮುಂಜೆ ಗುತ್ತು ಸಂಪತ್ ಸಾಮ್ರಾಜ್ಯ,, ರಾಮ್ ಪ್ರಸಾದ್, ಕೆ.ಆರ್. ಪಂಡಿತ್, ಬಾಹುಬಲಿ ಪ್ರಸಾದ್, ಚೌಟರ ಅರಮನ ಕುಲದೀಪ್ ಎಂ., ಪುರಸಭೆ ಸದಸ್ಯರು ಉಪಸ್ಥಿತರಿದ್ದರು.
ಜನರಲ್ ಮೆನೇಜರ್ ವಿನಯ್ ಭಟ್ ಪಿ.ಜೆ ಪ್ರಾಸ್ತಾವನೆಗೈದು ಸ್ವಾಗತಿಸಿದರು. ಮೂಡುಬಿದಿರೆ ಶಾಖೆಯ ಸಿಬ್ಬಂದಿ ಚೇತನಾ ಕಾರ್ಯಕ್ರಮ ನಿರೂಪಿಸಿದರು. ಮಹಾವೀರ ಶಾಖೆಯ ಮೆನೇಜರ್ ರಕ್ಷಿತ್ ಎನ್.ಶೆಟ್ಟಿ ವಂದಿಸಿದರು.
0 Comments