ಭಾರತೀಯ ಜನತಾ ಪಾರ್ಟಿ ಶಿರ್ತಾಡಿ ಮಹಾಶಕ್ತಿ ಕೇಂದ್ರದ ಸಭೆಯಲ್ಲಿ ರಾಜೀನಾಮೆ ನೀಡಿದ್ದ ಬಿಜೆಪಿ ಪ್ರಮುಖರನ್ನು ಮನವೊಲಿಸುವಲ್ಲಿ ಮಂಡಲ ಅಧ್ಯಕ್ಷ ಸುನಿಲ್ ಆಳ್ವಾ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ನಡೆದ ಬಿಜೆಪಿ ನಾಯಕ ಪ್ರವೀಣ್ ಹತ್ಯೆ ಖಂಡಿಸಿ ರಾಜ್ಯದಾದ್ಯಂತ ಬಿಜೆಪಿ ನಾಯಕರು ರಾಜೀನಾಮೆ ನೀಡಿದ್ದರು. ಮೂಡುಬಿದಿರೆ ಮಂಡಲದ ಪ್ರಮುಖರೂ ರಾಜೀನಾಮೆ ನೀಡಿದ್ದು ಇದರಲ್ಲಿ ಶಿರ್ತಾಡಿ ಮಹಾಶಕ್ತಿಕೇಂದ್ರದ ಬಿಜೆಪಿ ನಾಯಕರ ಸಿಂಹಪಾಲು. ಶಿರ್ತಾಡಿ ವ್ಯಾಪ್ತಿಯ ಮಾರ್ನಾಡು,ಬೆಳುವಾಯಿ,ಪಣಪಿಲ, ವಾಲ್ಪಾಡಿ ಸಹಿತ ಅನೇಕ ಭಾಗದ ಬಿಜೆಪಿ ನಾಯಕರು ರಾಜೀನಾಮೆ ನೀಡಿದ್ದರು. ಈ ಬಗ್ಗೆ ಮನವೊಲಿಸಿದ ಮಂಡಲ ಅಧ್ಯಕ್ಷರು ಮುಂದಿನ ದಿನಗಳಲ್ಲಿ ಪಕ್ಷದ ಸಾಂಘಿಕ ಶಕ್ತಿಯ ಅಗತ್ಯತೆಯನ್ನು ವಿವರಿಸಿದರು ಎನ್ನಲಾಗಿದೆ. ರಾಜೀನಾಮೆ ನೀಡಿದ್ದ ಪ್ರಮುಖರು ತಮ್ಮ ಅಭಿಪ್ರಾಯ ಹಾಗೂ ಆಕ್ರೋಶ ಮಂಡಿಸಿದ್ದಾರೆ ಎನ್ನಲಾಗಿದೆ. ನಂತರ ಎಲ್ಲರ ರಾಜೀನಾಮೆ ವಾಪಾಸ್ ಪಡೆಸಿಕೊಳ್ಳುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ.
ಮಾರ್ನಾಡು ಜಿ.ಕೆ ಗಾರ್ಡನ್ ನಲ್ಲಿ ಶಿರ್ತಾಡಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರಾದ ಸಂತೋಷ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರ್ ರವರ ಭಾವಚಿತ್ರ ಕ್ಕೆ ಪುಪ್ಪರ್ಚಾನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಂಡಲ ಅಧ್ಯಕ್ಷ ರಾದ ಸುನಿಲ್ ಅಳ್ವಾ,ಪ್ರಧಾನ ಕಾರ್ಯದರ್ಶಿ ಗೋಪಾಲ್ ಶೆಟ್ಟಿಗಾರ್,ಕೇಶವ್ ಕರ್ಕೆರಾ, ಲತಾ ಹೆಗ್ಡೆ, ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ಅಭಿಲಾಷ್ ಕಟೀಲ್ ಹಾಗೂ ಶಕ್ತಿ ಕೇಂದ್ರದ ಪ್ರಮುಖರು ,ಮಂಡಲದ ಜವಾಬ್ದಾರಿಯುತರು, ಪಂಚಾಯತ್ ಸದಸ್ಯರು ಬೂತ್ ಅಧ್ಯಕ್ಷ ಮತ್ತು ಕಾರ್ಯದರ್ಶಿ ಗಳು ಉಪಸ್ಥಿತರಿದ್ದರು. ಶಕ್ತಿ ಕೇಂದ್ರದ ಪ್ರಮುಖರಾದ ಶರತ್ ಶೆಟ್ಟಿ ಸ್ವಾಗತಿಸಿದರು, ದಿವ್ಯ ವರ್ಮ ಬಳ್ಳಾಲ್ ವಂದಿಸಿದರು.
0 Comments