ಶಿರ್ತಾಡಿ ಬಿಲ್ಲವ ಸಂಘದ ವತಿಯಿಂದ ಸಾರ್ವಜನಿಕ ವರ ಮಹಾಲಕ್ಷ್ಮಿ ವ್ರತಾಚರಣೆ: ಗುರುಪೀಠ ಲೋಕಾರ್ಪಣೆ

ಜಾಹೀರಾತು/Advertisment
ಜಾಹೀರಾತು/Advertisment

 

ಬಿಲ್ಲವ ಸೇವಾ ಸಮಾಜ ರಿಜಿಸ್ಟರ್ಡ್ ಶಿರ್ತಾಡಿ ಇದರ ವತಿಯಿಂದ ವರ್ಷಂಪ್ರತಿ ನಡೆಯುವ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮವು ನಡೆಯಿತು. ಅರ್ಚಕರಾದ ಕಂದೀರು ಶ್ರೀ ಸೋಮನಾಥ ಶಾಂತಿ ಅವರ ನೇತೃತ್ವದಲ್ಲಿ ನಡೆದ ಧಾರ್ಮಿಕ ಪೂಜಾ ಕೈಂಕರ್ಯದಲ್ಲಿ ಸುಮಾರು ನೂರಕ್ಕೂ ಅಧಿಕ ವ್ರತಧಾರಿಗಳು ಭಾಗಿಯಾಗಿದ್ದರು.


ಈ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಗುರುಪೀಠ ಅನಾವರಣಗೊಳಿಸಲಾಯಿತು. ಸಂಘದ ಅಧ್ಯಕ್ಷರು, ಮಹಿಳಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಗುರುಪೀಠ ಸಹಿತ ಇತರೆ ಕಾಮಗಾರಿಗಳಿಗೆ ದಾನವನ್ನು ನೀಡಿದ ದಾನಿಗಳನ್ನು ಗುರುತಿಸಲಾಯಿತು.

Post a Comment

0 Comments