ಕಾಂಗ್ರೆಸ್ ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ರವರು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ರಾಜಿನಾಮೆ ನೀಡಿದ್ದಾರೆ. ಕಳೆದ 2-3 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಬಗ್ಗೆ ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದ ಗುಲಾಂ ನಬಿ ಆಜಾದ್ ಇಂದು ಅಧಿಕೃತವಾಗಿ ತನ್ನ ಹುದ್ದೆಯನ್ನು ತ್ಯಜಿಸಿದ್ದಾರೆ. ಇತ್ತೀಚೆಗೆ ಜಮ್ಮು-ಕಾಶ್ಮೀರದ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದ ಗುಲಾಂ ನಬಿ ಆಜಾದ್ ರವರು ಪಕ್ಷದ ಬಗ್ಗೆ ಬಹಿರಂಗವಾಗಿ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದರು. ಈ ಹಿಂದೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ ಗುಲಾಂ ನಬಿ ಆಜಾದ್ ಪಕ್ಷದ ವೈಫಲ್ಯತೆಯನ್ನು ಟೀಕಿಸಿದ್ದರು ಮಾತ್ರವಲ್ಲದೆ ಅಪ್ರಬುದ್ಧ ಅಸಮರ್ಥ ನಾಯಕನಾದ ರಾಹುಲ್ ಗಾಂಧಿಯವರಿಗೆ ಪಕ್ಷದ ಚುಕ್ಕಾಣಿಯನ್ನು ನೀಡಿದ್ದು ಮಾತ್ರವಲ್ಲದೆ ಅವರನ್ನು ಪಕ್ಷದ ಸರ್ವಶ್ರೇಷ್ಠ ನಾಯಕ ಎಂಬಂತೆ ಬಿಂಬಿಸುವುದು ತಪ್ಪಾಗಿದೆ. ಇದರಿಂದಲೇ ಪಕ್ಷದ ಇಂದಿನ ಅವನತಿಗೆ ಕಾರಣವಾಗಿದೆ ಎಂಬ ಬಗ್ಗೆ ಸುದೀರ್ಘವಾದ ಮಾಹಿತಿಯನ್ನು ನೀಡಿದ್ದರು. ಇದಾಗಿಯೂ ಪಕ್ಷ ಮತ್ತೆ ಮತ್ತೆ ಗಾಂಧಿ ಪರಿವಾರವನ್ನೇ ವಿಜೃಂಭಿಸುತ್ತಿರುವುದು ಗುಲಾಂ ನಬಿ ಆಜಾದ್ ಅವರ ಸಿಟ್ಟಿಗೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಜೀ 23 ತಂಡದಲ್ಲಿದ್ದ ಗುಲಾಂ ನಬಿ ಆಜಾದ್ ಅವರು ಇಂದು ಕನಿಷ್ಠ ಪ್ರಾಥಮಿಕ ಸದಸ್ಯತ್ವವನ್ನು ತ್ಯಜಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ನ ಹಿರಿಯ ತಲೆಮಾರುಗಳಲ್ಲಿ ಓರ್ವ ರಾಗಿದ್ದ ಗುಲಾಂ ನಬಿ ಆಜಾದ್ ಅವರು ಪಕ್ಷವನ್ನು ತ್ಯಜಿಸಿದ್ದು ಕಾಂಗ್ರೆಸ್ಸಿಗೆ ಅತೀವ ಮುಜುಗರ ಹಾಗೂ ನಷ್ಟವನ್ನು ಉಂಟುಮಾಡಿದೆ ಎನ್ನುವುದು ಸುಳ್ಳಲ್ಲ.
0 Comments