ಮೂಡುಬಿದಿರೆ: ಆಗಸ್ಟ್ 17ರಿಂದ 27 ರವರಿಗೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಕಬಡ್ಡಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಬಿಹಾರದ ಪಟ್ನಾದಲ್ಲಿರುವ ಪಾಟಲಿಪುತ್ರ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 1 ರಿಂದ 4ರವರೆಗೆ ನಡೆಯುವ ಕಬಡ್ಡಿ ಪಂದ್ಯಾಟದಲ್ಲಿ 12 ವಿದ್ಯಾರ್ಥಿನಿಯರು ಕರ್ನಾಟಕವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ತಂಡದ ನಾಯಕಿಯಾಗಿ ಲಿಖಿತ(ದ. ಕ ) ಶಾಂತ ಭಾಯಿ (ವಿಜಯಪುರ), ಅಕ್ಷತಾ (ದ. ಕ) ,ಸುಶ್ಮಿತಾ (ಬೆಳಗಾಂ), ಸಹನಾ (ಉಡುಪಿ), ಸಿಂಧು (ರಾಮನಗರ),ಸವಿತಾ (ವಿಜಯಪುರ),ಲಲಿತಾ (ಬೆಳಗಾಂ), ಮಹಿಮಾ (ಬೆಂಗಳೂರು) ,ಶಿಲ್ಪ (ಬೆಂಗಳೂರು), ಕೀರ್ತನಾ (ಬೆಂಗಳೂರು), ಸುಚಿತ್ರ (ಬಾಗಲಕೋಟೆ), ತರಬೇತುದಾರರಾಗಿ ಹಂಸಾವತಿ ಸಿ. ಹೆಚ್ ಹಾಗೂ ವ್ಯವಸ್ಥಾಪಕರಾಗಿ ರೂಪಶ್ರೀ ಆಯ್ಕೆಯಾಗಿದ್ದಾರೆ.
0 Comments