ಶಾಸಕರನ್ನು ಪ್ರಶ್ನಿಸುವ ಮೊದಲು ಸತ್ಯವನ್ನು ಅರಿತುಕೊಳ್ಳಿ...
ಹಿರಿಯರು ಹೇಳುತ್ತಿದ್ದ ಗಾದೆ ಮಾತೊಂದು ನೆನಪಾಯಿತು. "ಕೊಡದ ತಾಯಿ ಎಂದೂ ಕೊಡಲ್ಲ,ಕೊಡುವ ಕೋಡಂಗಿಗೇನಾಯಿತು" ಎಂದು. ಯಾರಾದರೂ ದಿನಾ ಕೊಟ್ಟು ಕೊಟ್ಟು ಅದರಲ್ಲಿ ಸ್ವಲ್ಪ ಏರುಪೇರಾದರೆ ಆತನನ್ನು ವಿಲನ್ ಮಾಡುವ ಪರಂಪರೆ ಇಂದು ನಿನ್ನೆಯದಲ್ಲ.
ಇತ್ತೀಚಿಗೆ ಉಡುಪಿಯ ಮಹಿಳೆಯೋರ್ವರು ಉಡುಪಿಯ ಅಂಬಾಗಿಲು-ಪೆರಂಪಳ್ಳಿ ರಸ್ತೆಯ ಬಗ್ಗೆ ವೀಡಿಯೋ ಮಾಡಿದ್ದರು. ಸಮಸ್ಯೆಗಳನ್ನು ಸಂಬಂಧಿಸಿದ ಜನ ಪ್ರತಿನಿಧಿಗಳ ಗಮನಕ್ಕೆ ತರುವ ಹಕ್ಕು ಎಲ್ಲಾ ನಾಗರಿಕರಿಗೂ ಇದೆ. ಆದರೆ ಅದು ಗೌರವಯುತವಾಗಿರಬೇಕು. ಆದರೆ ಆ ಮಹಿಳೆಯ ಮಾತಿನಲ್ಲಿ ಉದ್ದೇಶಪೂರ್ವಕವಾಗಿ ಶಾಸಕರನ್ನು ಟಾರ್ಗೆಟ್ ಮಾಡುವ ಹುನ್ನಾರ ಅಡಗಿತ್ತು ಎಂಬುದು ಸ್ಪಷ್ಟವಾಗಿತ್ತು.
ಅದೇನೇ ಇರಲಿ. ಅವರ ಟೀಕೆಗಳಿಗೆ ಶಾಸಕರು ಈಗಾಗಲೇ ತಕ್ಕ ಉತ್ತರವನ್ನು ನೀಡಿದ್ದಾರೆ. ಅಂಬಾಗಿಲು- ಪೆರಂಪಳ್ಳಿ ರಸ್ತೆಯು ಸಮರ್ಪಕವಾಗಿಲ್ಲ ಎಂಬುದು ಆಕೆಯ ವಾದ. ಅಸಲಿಗೆ ಆ ರಸ್ತೆಯ ನೈಜ ವಿಚಾರವನ್ನು ತಿಳಿಯದೆ ಮಾಡಿರುವ ಅವರ ಜ್ಞಾನದ ಮಿತಿಯನ್ನು ಅಳೆಯಬಹುದು.
ರಘುಪತಿ ಭಟ್ ರವರು ಶಾಸಕರಾಗಿ ನಂತರ ಅದೆಷ್ಟೋ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಎಷ್ಟೋ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆಗಳಿಗೆ ಡಾಂಬಾರು ಅಥವಾ ಕಾಂಕ್ರೀಟ್ ಭಾಗ್ಯ ಕೊಟ್ಟವರೇ ನಮ್ಮ ಶಾಸಕರು. ವಿವಾದಗ್ರಸ್ತ ಅದೆಷ್ಟೋ ರಸ್ತೆಗಳನ್ನು ಸಂಬಂಧಿಸಿದ ಜಮೀನು ಮಾಲೀಕರ ಮನವೊಲಿಸಿ ರಸ್ತೆಗಳಿಗೆ ಮೂರ್ತರೂಪ ಕೊಟ್ಟವರೇ ರಘುಪತಿ ಭಟ್ ರವರು. ಅವರು ಶಾಸಕರಾದ ನಂತರ ಕೋಟ್ಯಾಂತರ ರೂಪಾಯಿ ಅನುದಾನದಿಂದ ರಸ್ತೆಗಳು ಅಭಿವೃದ್ಧಿಗೊಳ್ಳುತ್ತಿವೆ. ಈ ಬಗ್ಗೆ ಒಮ್ಮೆ ಅವಲೋಕಿಸಿದರೆ ಅರ್ಥವಾದೀತು.
ಈಗಲೂ ಅನೇಕ ರಸ್ತೆಗಳು ಅಭಿವೃದ್ಧಿಯ ಪಥದೆಡೆಗೆ ಸಾಗುತ್ತಿದೆ. ಅದರಲ್ಲಿ ಒಂದು ಅಂಬಾಗಿಲು-ಪೆರಂಪಳ್ಳಿ ರಸ್ತೆ. ಈ ರಸ್ತೆ ಅತಿ ಸುಂದರವಾಗಿ ನಿರ್ಮಾಣಗೊಳ್ಳುತ್ತಿದೆ. ಜಲ್ಲಿ ಹಾಕಿದ ಕೂಡಲೇ ಮಳೆ ರಭಸ ಆರಂಭವಾಗಿತ್ತು. ಎಷ್ಟೇ ಡಾಂಬಾರು ಹಾಕಿದರೂ ಮಳೆಗೆ ನಿಲ್ಲಲ್ಲ ಎಂಬುದು ಸತ್ಯದ ವಿಷಯ. ಇದನ್ನು ಗಮನದಲ್ಲಿಟ್ಟುಕೊಂಡ ಶಾಸಕರು ಗುತ್ತಿಗೆದಾರರಿಗೆ ಜಲ್ಲಿಯ ಮೇಲೆ ತಾತ್ಕಾಲಿಕ ಡಾಂಬಾರು ಹಾಕುವಂತೆ ಸೂಚಿಸಿದ್ದರು. ಹೀಗಾಗಿ ಪ್ರಯಾಣಿಕರಿಗೆ ತೊಂದರೆ ಆಗಬಾರದು,ಮಳೆ ಮುಗಿಯುವವರೆಗೂ ಪ್ರಯಾಣಕ್ಕೆ ತೊಡಕಾಗಬಾರದು ಎಂಬ ಕಾರಣಕ್ಕೆ ಪ್ರಥಮ ಲೇಯರ್ ನ ತಾತ್ಕಾಲಿಕ ಡಾಂಬಾರು ಹಾಕಲಾಗಿದೆ. ಮಳೆ ಮುಗಿದ ನಂತರ ಈ ಕಾಮಗಾರಿ ಮತ್ತಷ್ಟು ವೇಗವನ್ನು ಪಡೆದು ಸುಂದರ ರಸ್ತೆ ನಿರ್ಮಾಣವಾಗಲಿದೆ.
ಶಾಸಕರು ಈವರೆಗೆ ಕೊಟ್ಟ ಮಾತನ್ನು ತಪ್ಪಿಲ್ಲ. ಮಹಿಳೆಯೋರ್ವರ ಪ್ರಶ್ನೆಗೆ ವೀಡಿಯೋ ಮೂಲಕವೇ ಉತ್ತರಿಸುತ್ತಾರೆಂದರೆ ಒಮ್ಮೆ ಯೋಚನೆ ಮಾಡಿ ಶಾಸಕರ ಕಾರ್ಯವೈಖರಿಯ ಪ್ರಾಮಾಣಿಕತೆ ಎಷ್ಟಿದೆಯೆಂದು...
ಯಾವುದೋ ಒಂದು ವೀಡಿಯೋಗೆ ಉತ್ತರಿಸುವ ದುರ್ದು ಶಾಸಕರಿಗೂ ಇಲ್ಲ, ಸ್ಪಷ್ಟನೆ ನೀಡುವ ಅಗತ್ಯ ನಮಗೂ ಇಲ್ಲ. ಆದರೆ ಒಬ್ಬರು ಎತ್ತಿರುವ ಆರೋಪದ ಪ್ರಶ್ನೆಯಿಂದ ಉಳಿದವರಿಗೂ ಉತ್ತರವಾಗಲಿ ಎನ್ನುವುದು ನಮ್ಮ ಆಶಯ ಅಷ್ಟೇ...
ಮಹೇಶ್ ಠಾಕೂರ್, ಬಿಜೆಪಿ ನಗರಾಧ್ಯಕ್ಷರು
ಹೀಗೆ ವೀಡಿಯೋ ಮಾಡಿ ಶಾಸಕರನ್ನು ಟೀಕಿಸಿದ ಯುವರಿಗೆ ಮಹೇಶ್ ಠಾಕೂರ್ ಛಾಟಿ ಬೀಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆಗಳಾಗುತ್ತಿದ್ದು ಯಾವ ಹಂತಕ್ಕೆ ತಲುಪಲಿದೆ ಎಂದು ಕಾದುನೋಡಬೇಕಾಗಿದೆ.
0 Comments