ಪಂಚಾಯತ್‌ ಹಾಗೂ ಗ್ರಾಮಸ್ಥರ ಗಮನಕ್ಕೆ ತರದೇ ವಿದ್ಯುತ್ ಸಬ್ ಸ್ಟೇಷನ್ ಸರ್ವೆ - ಮರುಸರ್ವೆಗೆ ಗ್ರಾಮಸ್ಥರ ಅಕ್ರೋಶ

ಜಾಹೀರಾತು/Advertisment
ಜಾಹೀರಾತು/Advertisment

 


  ಮೂಡುಬಿದಿರೆ : ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂದಲೆ ಗ್ರಾಮದಲ್ಲಿ 400/220 ಕೆ.ವಿ. ಪಿ.ಟಿ.ಸಿ.ಎಲ್‌ನ ಇಂಜಿನಿಯರ್‌ಗಳು ಸರ್ವೆಯನ್ನು ನಡೆಸುತ್ತಿವೆ. ಪಾಲಡ್ಕ ವ್ಯಾಪ್ತಿಯ ಗ್ರಾಮಸ್ಥರು ಕೆ.ಪಿ.ಟಿ.ಸಿ.ಎಲ್.ನ ಎಕ್ಸಿಕ್ಯೂಟಿವ್ ಇಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ಪಾಲಡ್ಕದ ಪೂಪಾಡಿಕಲ್ಲಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ವಿಶೇಷ ಗ್ರಾಮಸಭೆಯಲ್ಲಿ ನಡೆಯಿತು.

26ಎಕರೆ ಜಾಗದಲ್ಲಿ ಸ್ಥಾಪನೆಯಾಗುವ ಈ ಸಬ್‌ಸ್ಟೇಷನ್‌ಗೆ ಗ್ರಾಮ ಪಂಚಾಯತ್‌ನಿಂದ ಆಕ್ಷೇಪವಿದೆ' ಎಂಬ ನಿರ್ಣಯವನ್ನು ಕಳುಹಿಸಲಾಗಿದೆ ಎಂದು ಪಿಡಿಓ ರಕ್ಷಿತಾ ಹೇಳಿದರು.
ಗ್ರಾಮಸ್ಥರ ಸಂಸದ ನಳಿನ್ ಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸುವ ಸಂದರ್ಭ ಜಿ.ಪಂ. ಮಾಜಿ ಅಧ್ಯಕ್ಷ, ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರ ಶೆಟ್ಟಿ, ಗ್ರಾಮಸ್ಥರು ಅವರ ಪರವಾದ ನಡೆಯುವ ಈ ವಿಶೇಷ ಗ್ರಾಮಸಭೆಯಲ್ಲಿ ರಾಜಕೀಯ ವ್ಯಕ್ತಿಗಳ ಹೆಸರು ಉಲ್ಲೇಖಿಸಿ ಸಭೆಯನ್ನು ರಾಜಕೀಯ ಆಟಕ್ಕೆ ಬಳಸಿಕೊಳ್ಳಬೇಡಿ ಎಂದು ಎಚ್ಚರಿಸಿದರು.ಜನರಿಗೆ ಅನ್ಯಾಯವಾದರೆ ನಾನು ಬಿಡುವುದಿಲ್ಲ. ನಮಗೆ ಒಳ್ಳೆಯದಾಗುವುದಾದರೆ ಮಾತ್ರ ಯೋಜನೆ' ಬರಲಿ ಅವರು ಹೇಳಿದರು. ಜಿಪಂ ಮಾಜಿ ಸದಸ್ಯೆ ಸುನೀತಾ ಎಸ್. ಶೆಟ್ಟಿ ಅವರೂ
ದನಿಗೂಡಿಸಿದರು.
ಗ್ರಾಪಂ ಅಧ್ಯಕ್ಷ ದಿನೇಶ್ ಕಾಂಗ್ಲಾಯಿ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಕೆಪಿಟಿಸಿಎಲ್ ಸಹಾಯಕ.ಐ ಶ್ರೀನಾಥ್ ಸಹಿತ ಇತರ ಅಧಿಕಾರಿಗಳು, ಉಪಾಧ್ಯಕ್ಷ ಸುಕೇಶ್ ಶೆಟ್ಟಿ ಕೇಮಾರು ಭಾಗವಹಿಸಿದ್ದರು.

Post a Comment

0 Comments