ಭಾರತೀಯ ಕಿಸಾನ್ ಸಂಘ ,ಹಾಗೂ ಪತಂಜಲಿ ಯೋಗ ಪರಿವಾರ ವತಿಯಿಂದ ತಿರಂಗ ರೈತ ಪಾದಯಾತ್ರೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ:   ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮೂಡುಬಿದಿರೆ ತಾಲೂಕಿನ ಭಾರತೀಯ ಕಿಸಾನ್ ಸಂಘ ,ಹಾಗೂ ಪತಂಜಲಿ ಯೋಗ ಪರಿವಾರ, ಮೂಡುಬಿದಿರೆ ವಲಯ 

ಇವುಗಳ ಜಂಟಿ ಸಹಭಾಗಿತ್ವದಲ್ಲಿ  ಭಾರತೀಯ ಕಿಸಾನ್ ಸಂಘದ ವತಿಯಿಂದ ತಿರಂಗ ರೈತ ಪಾದಯಾತ್ರೆ ಭಾನುವಾರ ನಡೆಯಿತು.    

ತಿರಂಗಾ ರೈತ ಪಾದಯಾತ್ರೆ" ಯನ್ನು ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ಭಾರತೀಯ ಕಿಸನ್ ಸಂಘದ ಜಿಲ್ಲಾ ಸಮಿತಿ ಸದಸ್ಯರಾದ ರವಿರಾಜ ಪುತ್ತೂರು ಮತ್ತು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ  ಚಾಲನೆಯನ್ನು  ನೀಡಿದರು. 

ನ್ಯಾಯವಾದಿ, ಜಿಲ್ಲಾಧ್ಯಕ್ಷ ಶಾಂತಿ ಪ್ರಸಾದ್ ಹೆಗ್ಡೆ, ಭಾರತೀಯ ಕಿಸಾನ್ ಸಂಘದ ಗ್ರಾಮಾಂತರ ಅಧ್ಯಕ್ಷ  ಜಯಾನಂದ ನಾಯಕ್, ಮುಲ್ಕಿ ತಾಲೂಕು ಅಧ್ಯಕ್ಷ  ಪುರುಷೋತ್ತಮ್ ಕೋಟ್ಯಾನ್, ತೋಟಗಾರಿಕಾ ಇಲಾಖೆಯ ಯುಗೇಂದ್ರ, ಕೃಷಿಕ, ನಿವೃತ್ತ ಸೈನಿಕ ಶ್ರೀಧರ ಭಂಡಾರಿ,  ಹಿರಿಯ ಕೃಷಿಕ ಜಾನ್  ರೆಬೆಲ್ಲೊ ಸುಖಾನಂದ ಶೆಟ್ಟಿ  ಕೊಟ್ರಪ್ಪಾಡಿ,ಯೋಗ ಶಿಕ್ಷಕಿ ಪೂರ್ಣಿಮಾ, ಪ್ರವೀಣ್ ಭಂಡಾರಿ ಆಲಂಗಾರ್ ಮತ್ತಿತರ ಕೃಷಿಕರು ಭಾಗವಹಿಸಿದ್ದರು.

  ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಬಳಿಯಿಂದ ಅಮರಶ್ರೀ ಟಾಕೀಸ್  ಮುಂಭಾಗದಿಂದ ಹಾದು ಹಳೆ ಪೊಲೀಸ್ ಠಾಣೆಯ ಮುಖಾಂತರವಾಗಿ ಮೂಡುಬಿದಿರೆ ಬಸ್ ನಿಲ್ದಾಣದವರೆಗೆ ಜಾಥಾ ನಡೆಯಿತು.

Post a Comment

0 Comments