ಬಿಜೆಪಿಯ ವ್ಯಾಪಾರ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಮೂಡುಬಿದಿರೆ ತಾಲೂಕಿನ ನಿಡ್ಡೋಡಿ ಜಗನ್ನಾಥ ಎಸ್. ಶೆಟ್ಟಿ ಮೈಸೂರಿನಲ್ಲಿ ಹನಿಟ್ರಾಪ್‌ಗೊಳಗಾಗಿ 50ಲಕ್ಷ ರೂ. ಕಳೆದುಕೊಂಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಮಂಡ್ಯದಲ್ಲಿ ಚಿನ್ನದ ವ್ಯಾಪಾರಿಯಾಗಿರುವ ಅವರು ಮಂಗಳೂರಿಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದ ಸಂದರ್ಭ ಡ್ರಾಪ್ ಕೊಡುವುದಾಗಿ ನಂಬಿಸಿ ನಾಲ್ವರು ಕರೆದೊಯ್ದು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣದ ಕುರಿತಂತೆ ಪೊಲೀಸರು ಮಾನವ ಹಕ್ಕು ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಮಂಡ್ಯ ಸುಭಾಸ್‌ನಗರದ ಸಲ್ಮಾ ಬಾನು ಮತ್ತು ಜಯಂತ್ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹಣಕ್ಕಾಗಿ ಆರೋಪಿಗಳು ಬೇಡಿಕೆ ಇಟ್ಟಿದ್ದು 50ಲಕ್ಷ ಪಡೆದುಕೊಂಡರೂ ಹೆಚ್ಚುವರಿಯಾಗಿ ನೀಡುವಂತೆ ಸತಾಯಿಸುತ್ತಿರುವ ಬಗ್ಗೆ ಅವರು ದೂರಿನಲ್ಲಿ ತಿಳಿಸಿದ್ದಾರೆ
0 Comments