ಮೂಡುಬಿದಿರೆ : ಶ್ರೀ ಕೃಷ್ಣ ಫ್ರೆಂಡ್ಸ್, ಕಡ್ಪಲಗುರಿ ಅಶ್ವತ್ಥಪುರ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಿಯ ಪ್ರಯುಕ್ತ ನಡೆದ ಮೊಸರು ಕುಡಿಕೆ ಉತ್ಸವದಲ್ಲಿ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆದವು.
ಊರಿನ ಹಿರಿಯರಾದ ಭುಜಂಗ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಸಮಿತಿಯ ಅಧ್ಯಕ್ಷ ಲಿಂಗಪ್ಪ ಗೌಡ ಕಡ್ಪಲಗುರಿ,ಗೌರವಾಧ್ಯಕ್ಷ ಗೋಪಾಲ ಗೌಡ, ಉಪಾಧ್ಯಕ್ಷ ರಾಮಚಂದ್ರ ಕಡ್ಪಲಗುರಿ, ಕಾರ್ಯದರ್ಶಿ ಸುರೇಂದ್ರ ಪಂಜುರ್ಲಿಗುಡ್ಡೆ, ಕೋಶಾಧಿಕಾರಿ ಕೃಷ್ಣ ಪಂಜುರ್ಲಿಗುಡ್ಡೆ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಮೇಸ್ತ್ರಿ ಕುಕ್ಕುದಡಿ, ಗೌರವಾಧ್ಯಕ್ಷ ಅಶ್ವತ್ಥಾಮ ವಿ.ಎಸ್ .ಸಂತೆಕಟ್ಟೆ ಉಪಸ್ಥಿತರಿದ್ದರು.
ಮುದ್ದು ಕೃಷ್ಣ ಮತ್ತು ಬಾಲಕೃಷ್ಣ ಸ್ಪರ್ಧೆಯಲ್ಲಿ ಒಟ್ಟು 55 ಮಕ್ಕಳು ಸ್ಪರ್ಧಿಸಿದ್ದರು.
ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಲಿನಿಶ್ ಎಲ್.ಎಸ್ . ಪಂಜುರ್ಲಿಗುಡ್ಡೆ (ಪ್ರಥಮ), ಶೌರ್ಯ ದ್ವಿತೀಯ.
ಬಾಲಕೃಷ್ಣ ಸ್ಪರ್ಧೆಯಲ್ಲಿ ನಮೃತಾ ಒಡ್ಡೂರು (ಪ್ರಥಮ), ವಿನೀತ್ ದ್ವಿತೀಯ ಬಹುಮಾನವನ್ನು ಪಡೆದುಕೊಂಡರು.
ತೀರ್ಪುಗಾರರಾಗಿ ಗೀತಾ ಆಚಾರ್ಯ ಮೂಡುಬಿದಿರೆ, ಮಜಾಭಾರತ ಖ್ಯಾತಿಯ ಶಿವರಾಜ್ ಕೆ., ಶಿಕ್ಷಕಿಯರಾದ ಸಾವಿತ್ರಿ ಮತ್ತು ಸುಮತಿ ಭಾಗವಹಿಸಿದ್ದರು.
ಪ್ರಸಾದ್ ಅಶ್ವತ್ಥ ಪುರ ಮತ್ತು ಪ್ರವೀಣ್ ಅಶ್ವತ್ಥಪುರ ಕಾರ್ಯಕ್ರಮ ನಿರೂಪಿಸಿದರು.
0 Comments