ಡಿಕೆಶಿ ಐಟಿ ದಾಳಿ ಹಿಂದೆ ಸಿದ್ದರಾಮಯ್ಯ ಇದ್ದಾನೆ.!ಡಿಕೆಶಿ ತಾಯಿಯ ವಿಡಿಯೋ ಹಾಕಿ ಕಾಲೆಳೆದ ಬಿಜೆಪಿ.!

ಜಾಹೀರಾತು/Advertisment
ಜಾಹೀರಾತು/Advertisment

 

ಡಿಕೆಶಿ ಅವರೇ, ನಿಮ್ಮ ವಿರುದ್ಧ ಮಸಲತ್ತು ನಡೆಸಿದವರು ಯಾರು ಎಂದು ತಾಯಿ ಸ್ಪಷ್ಟವಾಗಿ ಹೇಳಿದ್ದಾರೆ. ಹೆತ್ತವರ ಒಡಲ ಉರಿ ಸುಳ್ಳು ಹೇಳುವುದಿಲ್ಲ. ನನ್ನ ಮಗ ಮುಖ್ಯಮಂತ್ರಿಯಾಗುತ್ತಾನೆ ಎಂದು ಸಿದ್ದರಾಮಯ್ಯ ಒಳಗೊಳಗೆ ಮಸಲತ್ತು ನಡೆಸುತ್ತಾರೆ ಎಂದು ತಾಯಿ ಈ ಹಿಂದೆಯೇ ನೋವು ತೋಡಿಕೊಂಡಿದ್ದಾರೆ. ಈಗ ಅದೇ ಸತ್ಯವಾಗುತ್ತಿದೆ!

ಇದು ರಾಜ್ಯ ಬಿಜೆಪಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಕಾಲೆಳೆದ ಪರಿ. ಡಿಕೆಶಿ ಅವರ ಮೇಲೆ ಐಟಿ ಹಿಡಿ ದಾಳಿ ನಡೆಸಿದ್ದನ್ನು ಬಿಜೆಪಿಗರ ಕುತಂತ್ರ ಎಂದಿದ್ದ ಡಿಕೆಶಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.


ಈ ಹಿಂದೆ ತನ್ನ ಮಗನ ಮೇಲೆ ಐಟಿ ದಾಳಿ ಆಗಲು ಸಿದ್ದರಾಮಯ್ಯನೇ ಕಾರಣ. ನನ್ನ ಮಕ್ಕಳ ಏಳಿಗೆಯನ್ನು ಸಿದ್ದರಾಮಯ್ಯನಿಗೆ ಸಹಿಸಲು ಆಗುತ್ತಿಲ್ಲ. ನನ್ನ ಮಕ್ಕಳನ್ನು ರಾಜಕೀಯವಾಗಿ ಮುಗಿಸಲು ಅವನು ಹೊರಟಿದ್ದಾನೆ. ಅವನನ್ನು ಹೇಗೆ ಎದುರಿಸಬೇಕು ಎಂದು ನನ್ನ ಮಕ್ಕಳಿಗೆ ಗೊತ್ತಿದೆ ಎಂದು ಡಿಕೆಶಿ ತಾಯಿ ನೀಡಿದ್ದ ವೀಡಿಯೋವನ್ನು ರಾಜ್ಯ ಬಿಜೆಪಿ ಟ್ವೀಟ್ ಮಾಡಿ ಕಾಲೆಳೆದಿದೆ.



Post a Comment

0 Comments