ಪುತ್ತಿಗೆ ದೇವಳದಲ್ಲಿ ಷಡಾಧಾರ ಪ್ರತಿಷ್ಠೆ, ನಿಧಿಕುಂಭ ಸ್ಥಾಪನೆ

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ: 18 ಮಾಗಣೆ, 77 ಗ್ರಾಮಗಳಿಗೆ ಸಂಬಂಧಿಸಿದ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಶ್ರೀ ಸೋಮನಾಥೇಶ್ವರ ದೇವರು, ಮಹಿಷಮರ್ದಿನಿ ಅಮ್ಮನವರ ನೂತನ ಗರ್ಭಗುಡಿ ನಿರ್ಮಾಣಾಂಗ ವಾಗಿ ಷಡಾಧಾರ ಪ್ರತಿಷ್ಠೆ ಹಾಗೂ ನಿಧಿಕುಂಭ ಸ್ಥಾಪನೆ ವಿಧಿಯು ಎಡ ಪದವು ಬ್ರಹ್ಮಶ್ರೀ ತಂತ್ರಿಗಳ ನೇತೃತ್ವದಲ್ಲಿ ಜುಲೈ 7ರಂದು 11.10ಕ್ಕೆ ನಡೆಯಲಿದೆ ಎಂದು ದೇವಳದ ಆನುವಂಶಿಕ ಮೊಕ್ತೇಸರ, ಚೌಟರ ಅರಮನೆಯ ಕುಲದೀಪ ಎಂ. ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

900 ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನದ ಜೀಣೋ ದ್ಧಾರ ಕೆಲಸವು ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆಯ ಅಭಿವೃದ್ಧಿ ಸಮಿತಿಯ ಮುತುವರ್ಜಿ ಯಲ್ಲಿ ನಡೆಯುತ್ತಿದೆ. ಷಡಾಧಾರ ಪ್ರತಿಷ್ಠೆ, ನಿಧಿಕುಂಭ ಸ್ಥಾಪನೆಗೆ ಸಮರ್ಪಿಸುವ 24 ಕ್ಯಾರೆಟ್ ಶುದ್ಧ ಚಿನ್ನ ಮತ್ತು ಬೆಳ್ಳಿ ದೇವಳ ದಲ್ಲೇ ಭಕ್ತಾಧಿಗಳಿಗೆ ಜು. 7ರಂದು ಬೆಳಗ್ಗೆ 10 ಗಂಟೆಯವರೆಗೆ ಲಭ್ಯವಾಗಲಿದೆ. ಚಿನ್ನ 100 ಮಿ.ಗ್ರಾಂಗೆ 750, 200 ಮಿ.ಗ್ರಾಂಗೆ 1500, 1ಗ್ರಾಂಗೆ 6000 ರೂಪಾಯಿ ಗಳನ್ನು ಹಾಗೂ ಬೆಳ್ಳಿ 250, 500, 1000 ರೂಪಾಯಿಗಳನ್ನು ನಿಗಧಿ ಪಡಿಸಲಾಗಿದೆ ಎಂದು ಅವರು ವಿವರ ನೀಡಿದರು.
ಅಭಿವೃದ್ಧಿ ಸಮಿತಿಯ ಅಧ್ಯಕ್ಷ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕಾರ್ಯದರ್ಶಿ ವಿದ್ಯಾ ರಮೇಶ್ ಭಟ್, ಉಪಾಧ್ಯಕ್ಷ ಧನಕೀರ್ತಿ ಬಲಿಪ, ಪವಿತ್ರಪಾಣಿ ಶಿವಪ್ರಸಾದ್ ಆಚಾರ್ಯ, ಸದಸ್ಯರಾದ ಜಿ.ಉಮೇಶ್ ಪೈ, ಪ್ರಶಾಂತ್ ಭಂಡಾರಿ ಸುದ್ದಿಗೋಷ್ಠಿಯಲ್ಲಿದ್ದರು.

Post a Comment

0 Comments