ಅವನು ನನ್ನ ಗಂಡ:ವೈರಲ್ ವೀಡಿಯೋ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ ನವ್ಯಶ್ರೀ

ಜಾಹೀರಾತು/Advertisment
ಜಾಹೀರಾತು/Advertisment

 

ಕಾಂಗ್ರೆಸ್ ಕಾರ್ಯಕರ್ತೆ ಎನ್ನಲಾದ  ನವ್ಯಶ್ರೀ ಎಂಬಾಕೆಯ  ಖಾಸಗಿ ವಿಡಿಯೋ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿತ್ತು. ಈ ಬಗ್ಗೆ ಮೊದಲ ಬಾರಿಗೆ  ನವ್ಯಶ್ರೀ ಮಾಧ್ಯಮದ ಮುಂದೆ ಹೇಳಿಕೆಯನ್ನು ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ನವ್ಯಶ್ರೀ  ಅನೇಕ ಬಾರಿ ಮೋದಿ ಸರ್ಕಾರ ಹಾಗೂ ಬಿಜೆಪಿಯನ್ನು ಟೀಕಿಸಿದ್ದಳು, ಹಾಗೂ ಡಿ.ಕೆ. ಶಿವಕುಮಾರ್, ರಾಹುಲ್ ಗಾಂಧಿ,  ಸಿದ್ದರಾಮಯ್ಯ ಸಹಿತ ಅನೇಕ ಕಾಂಗ್ರೆಸ್ ಮುಖಂಡರ ಜೊತೆಗೆ ಗುರುತಿಸಿಕೊಂಡು ತನ್ನದೇ ಆದ ಸಂಘಟನೆಯನ್ನು ಕಟ್ಟಿದ್ದಳು.ಆದರೆ ಅದನ್ನು ದುರ್ಬಳಕೆ ಮಾಡಿಕೊಂಡು ಹನಿಟ್ರಾಪ್ ಮೂಲಕ ರಾಜಕಾರಣಿಗಳನ್ನು ಬಲೆಗೆ ಬೀಳಿಸುವ ಹುನ್ನಾರ ನಡೆಸುತ್ತಿದ್ದಳು ಎನ್ನುವಂತಹ ಗುಮಾನಿಗಳು ಎದ್ದಿತ್ತು.

ಇದಕ್ಕೆ ಪೂರಕವಾಗಿ ಇತ್ತೀಚೆಗೆ ಅನಾಮಧೇಯ ವ್ಯಕ್ತಿಯೊಂದಿಗೆ   ನವ್ಯಶ್ರೀ ಯ ಲೈಂಗಿಕ ಚಟುವಟಿಕೆ ನಡೆಸುವ ಹಾಗೂ ಖಾಸಗಿ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಮೊದಲ ಬಾರಿಗೆ ಹೇಳಿಕೆ ನೀಡಿದ ನವ್ಯಶ್ರೀ, ನಾನು ಈಗ ತಾನೇ ವಿದೇಶದಿಂದ ಭಾರತಕ್ಕೆ ಮರಳಿದ್ದೇನಷ್ಟೇ ಈ ಬಗ್ಗೆ ಸಂಪೂರ್ಣವಾಗಿ ವಿವರವನ್ನು ನೀಡುತ್ತೇನೆ. ಅವನು ನನ್ನ ಗಂಡ, ವಿಡಿಯೋದಲ್ಲಿ ಇರುವಂತಹ ವ್ಯಕ್ತಿ ನನ್ನ ಪತಿಯಾಗಿದ್ದಾನೆ. ನನಗೆ ಮೋಸ ಆಗಿದೆ ಹೀಗಾಗಿ ವಿಡಿಯೋ ವೈರಲ್ ಆಗಿದೆ ನಾನು ಚಾರಿತ್ರ್ಯವಂತಳು ಎಂದು ಹೇಳಿಕೆಯನ್ನು ನೀಡಿದ್ದಾಳೆ. ಮುಂದಿನ ಎರಡು ದಿನಗಳ ಒಳಗೆ ಪತ್ರಿಕಾಗೋಷ್ಠಿಯನ್ನು ಕರೆಯುತ್ತೇನೆ ಎಂದು ಹೇಳಿರುವ ನವ್ಯಶ್ರೀ ಮಾಧ್ಯಮಗಳ ಹಿಡಿತದಿಂದ ಕಾಲ್ಕಿತ್ತಿದ್ದಾಳೆ.

Post a Comment

0 Comments