ಕೂದಲೆಳೆ ಅಂತರದಿಂದ ಪಾರಾದ ಕಾಲೇಜು ವಿದ್ಯಾರ್ಥಿನಿ

ಜಾಹೀರಾತು/Advertisment
ಜಾಹೀರಾತು/Advertisment

ಮೂಡುಬಿದಿರೆ: ಬಸ್ ಚಾಲಕ ಮತ್ತು ನಿರ್ವಾಹಕ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿನಿಯೋರ್ವಳು ಬಸ್ ನಿಂದ ಕೆಳಗೆ ಜಾರಿ ಬಿದ್ದ ಘಟನೆ ನಿನ್ನೆ ಸಂಜೆ ಮೂಡುಬಿದಿರೆಯ ವಿದ್ಯಾಗಿರಿ ಬಳಿ ನಡೆದಿದೆ.

ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಈಕೆ ಸಂಜೆ ಕಾಲೇಜು ಬಿಟ್ಟು ಮನೆಗೆ ತೆರಳುವ ಸಂದರ್ಭ ವಿದ್ಯಾಗಿರಿಯಲ್ಲಿ ಜೀವನ್ ಟ್ರಾವೆಲ್ಸ್ ಎಂಬ ಹೆಸರಿನ ಖಾಸಗಿ ಬಸ್ಸ್ ಗೆ ಹತ್ತಿದ್ದಾಳೆ .ಈಕೆಯಲ್ಲದೆ ಇನ್ನೂ ಕೆಲವು ವಿದ್ಯಾರ್ಥಿಗಳೂ ಹತ್ತಿದ್ದಾರೆ. ಈ ಸಂದರ್ಭ ಬಸ್ ಕಂಡಕ್ಟರ್ ಕೂಡಾ ಅಲ್ಲೆ ಇದ್ದಾರೆ .ಈಕೆ ಬಸ್ ನ ಸ್ಟೆಪ್ ಗೆ ಕಾಲಿಟ್ಟು ಮೇಲೆ ಹೋಗುವ ಸಂದರ್ಭದಲ್ಲಿಯೇ ಬಸ್ ಚಾಲಕ ಬಸ್ಸನ್ನು ಸ್ಟಾಟ್ ೯ ಮಾಡಿದ್ದಾರೆನ್ನಲಾಗಿದೆ. ಆಗ ಅಯ ತಪ್ಪಿದ ವಿದ್ಯಾರ್ಥಿನಿ ಬಸ್ಸಿನಿಂದ ಕೆಳಗೆ ಬಿದ್ದಿದ್ದು ಬಸ್ಸಿನ ಚಕ್ರದಿಂದ ಸ್ವಲ್ಪದರಲ್ಲೆ ತಪ್ಪಿಸಿಕೊಂಡು ಅಪಾಯದಿಂದ ಪಾರಾಗಿದ್ದಾರೆ.



ತಕ್ಷಣ ವಿದ್ಯಾರ್ಥಿನಿಯನ್ನು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ.

Post a Comment

0 Comments