ಮಾಸ್ತಿಕಟ್ಟೆ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಹಾಗೂ ನೋಟ್ ಪುಸ್ತಕ ವಿತರಣೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಮೂಡುಬಿದಿರೆಯ ಸ.ಹಿ.ಪ್ರಾಥಮಿಕ ಶಾಲೆ ಮಾಸ್ತಿಕಟ್ಟೆಯಲ್ಲಿ ಮಂಗಳವಾರದ ಪಠ್ಯಪುಸ್ತಕ ಹಾಗೂ ಉಚಿತ ನೋಟ್ ಪುಸ್ತಕ ವಿತರಣೆಯನ್ನು ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ವಿದ್ಯಾರ್ಥಿಗಳಿಗೆ ವಿತರಿಸಿದರು.

ನಂತರ ಮಾತನಾಡಿದ ಅವರು, ದಾನದಲ್ಲಿ ಶ್ರೇಷ್ಠದಾನ ವಿದ್ಯಾದಾನ. ವಿದ್ಯೆಯನ್ನು ಎಂದಿಗೂ ಪೂರ್ಣವಾಗಿ ಕಲಿತಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ವಿದ್ಯೆಯನ್ನು ಹುಟ್ಟಿನಿಂದ ಸಾಯುವವರೆಗೂ ಕಲಿಯಲು ಇರುತ್ತದೆ ಎಂದ ಅವರು, ಅಂತಹ ಮಹಾನ್ ಕಾರ್ಯಕ್ಕೆ ಸಹಕರಿಸಿದ ದಾನಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು.

 ವಿದ್ಯಾರ್ಥಿಗಳಿಗೆ ಪುಸ್ತಕವನ್ನು ಉಚಿತವಾಗಿ ನೀಡಿದ ದಾನಿಗಳಾದ ಸಿರಿಲ್ ರಿಚರ್ಡ್ ಡಿಸೋಜಾ ಮಾತನಾಡಿ, ವಿದ್ಯಾರ್ಥಿಗಳೆಲ್ಲಾ ಚೆನ್ನಾಗಿ ಕಲಿತು ಶಾಲೆಗೆ ಹೆಸರನ್ನು ತಂದು, ಉನ್ನತ ಹುದ್ದೆಯನ್ನು ಪಡೆದುಕೊಳ್ಳಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಅಶೋಕ್ ಆಚಾರ್ಯ, ತ್ರಿಭುವನ್ ಹೋಟೆಲ್ ಮಾಲಕ ಪೃಥ್ವಿರಾಜ್ ಜೈನ್, ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು, ಅಧ್ಯಾಪಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು, ಶಿಕ್ಷಕಿ ನಾಗರತ್ನಮ್ಮ ನಿರೂಪಿಸಿ, ಮುಖ್ಯೋಪಾಧ್ಯಯಿನಿ ಸೇಸಮ್ಮ ಸ್ವಾಗತಿಸಿದರು. ಶಿಕ್ಷಕಿ ಸಂಗೀತಾ ಕುಮಾರಿ ಧನ್ಯವಾದಗೈದರು.

Post a Comment

0 Comments