ದೇಶದ ಪ್ರಧಾನಿ ಎಂಟು ವರುಷ ಪೂರ್ಣ-ಭಾರತೀಯ ಜನತಾ ಪಾರ್ಟಿಯಿಂದ ಹದಿನೈದು ದಿನಗಳ ಕಾಲ ವಿವಿಧ ಜನೋಪಯೋಗಿ ಕಾರ್ಯಕ್ರಮಗಳು

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ: ದೇಶದ ಪ್ರಧಾನಿಯಾಗಿ ಎಂಟು ವರುಷಗಳ ಸಮಯದಲ್ಲಿ ನರೇಂದ್ರಮೋದಿಯವರು ಮಾಡಿದ ಜನಪರ ಕಾರ್ಯಗಳು ಹಾಗೂ ಸಾಧನೆಗಳನ್ನು ಮತ್ತೆ ನೆನಪಿಸುವ, ಜನಸಾಮಾನ್ಯರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಹದಿನೈದು ದಿನಗಳಲ್ಲಿ ಹದಿನೈದು ವಿಭಾಗಗಳಲ್ಲಿ ಸೇವೆ, ಸುಶಾಸನ, ಬಡವರ ಕಲ್ಯಾಣ ಚಿಂತನೆಯೊಂದಿಗೆ ನಿರಂತರ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದು ಭಾರತೀಯ ಜನತಾ ಪಾರ್ಟಿಯ ಮೂಲ್ಕಿ ಮೂಡುಬಿದಿರೆ ಮಂಡಲದ ಅಧ್ಯಕ್ಷ ಸುನೀಲ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

 ಮೂಡುಬಿದಿರೆ  ವಿದ್ಯಾಗಿರಿಯ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಮೋದಿ ನೇತೃತ್ವದ ಕೇಂದ್ರ ಸರಕಾರದ ಮೊದಲ ಅವಧಿಯ ೫ವರ್ಷ ಹಾಗೂ ದ್ವಿತೀಯ ಅವಧಿಯ ಮೂರು ವರ್ಷಗಳು ಯಶಸ್ವಿಯಾಗಿ ಸಂದಿದ್ದು, ಈ ನಿಟ್ಟಿನಲ್ಲಿ 

ಎಸ್.ಸಿ ಮತ್ತು ಎಸ್.ಟಿ. ಮೋರ್ಚಾಗಳ ವತಿಯಿಂದ ವೈದ್ಯಕೀಯ ತಪಾಸಣಾ ಕಾರ್ಯಕ್ರಮ, ಯುವ ಮೋರ್ಚಾದ ವತಿಯಿಂದ ಬೈಕ್ ರ‍್ಯಾಲಿಯ ಮೂಲಕ ಜನಜಾಗೃತಿ ಕಾರ್ಯಕ್ರಮ, ಇದೇ 19ರಂದು ಮಂಡಲ ಮಟ್ಟದ ಫಲಾನುಭವಿಗಳ ಸಮಾವೇಶ ಮತ್ತು ತಾಲೂಕು ಮಟ್ಟದ ರೈತ ಸಂವಾದ ಕಾರ್ಯಕ್ರಮ ಮೂಡುಬಿದಿರೆಯ ಸ್ಕೌಟ್ ಗೈಡ್ಸ್ ಕನ್ನಡ ಭವನದಲ್ಲಿ ನಡೆಸಲಾಗುವುದು ಎಂದರು.  

 ಶಾಸಕ ಉಮಾನಾಥ್ ಕೋಟ್ಯಾನ್ , ಬಿಜೆಪಿ ಪ್ರಮುಖರಾದ ಗೋಪಾಲ್ ಶೆಟ್ಟಿಗಾರ್, ಕೇಶವ ಕರ್ಕೇರ, ವಿನೋದ್ ಬೆಳ್ಳಾರೆ, ಹರೀಶ್ ಮೂಡುಶೆಡ್ಡೆ, ಅಜಯ್ ರೈ ಉಪಸ್ಥಿತರಿದ್ದರು.

Post a Comment

0 Comments