ಖರ್ಗೆ ಹಾಗೂ ಪುತ್ರನ ಅಕ್ರಮ ಆಸ್ತಿ ಕೆದಕಿ ಪ್ರಶ್ನೆಗಳ ಸುರಿಮಳೆಗೈದ ನೆಟ್ಟಿಗರು.! ಸಚಿವ ಕೋಟರನ್ನು ಪ್ರಶ್ನಿಸಿದ ಖರ್ಗೆ ಪುತ್ರನಿಗೆ ನೆಟ್ಟಿಗರ ಸವಾಲು

ಜಾಹೀರಾತು/Advertisment
ಜಾಹೀರಾತು/Advertisment


 ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಎನ್.ಡಿ.ಎ.  ಮಿತ್ರ ಪಕ್ಷಗಳು ಆಯ್ಕೆ ಮಾಡಿದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಬಗ್ಗೆ ರಾಜ್ಯದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಟ್ವೀಟ್ ಮಾಡಿದ್ದು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.


ಸಚಿವರು ದಲಿತ ಮುಸ್ಲಿಂ ಹಾಗೂ ಬುಡಕಟ್ಟು ಮಹಿಳೆಯನ್ನು ರಾಷ್ಟ್ರಪತಿ ಮಾಡುವ ಮೂಲಕ ನಾವು ಜಾತಿವಾದಿಗಳಾಲ್ಲ ರಾಷ್ಟ್ರವಾದಿಗಳು ಎಂಬ ಸಂದೇಶವನ್ನು ನೀಡಿದ್ದೇವೆ ಎಂಬುದನ್ನು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ್ದ  ಮಾಜಿ ಸಚಿವ ಹಾಗೂ ಶಾಸಕ ಪ್ರೀಯಾಂಕ ಖರ್ಗೆ  ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅಣಕಿಸಿದ್ದರು. ಇದಕ್ಕೆ ಪ್ರತಿಯಾಗಿ ಕೆಂಡ ಕಾರಿದ ನೆಟಿಗರು ಪ್ರಿಯಾಂಕಾ ಖರ್ಗೆ ಅವರ ಆಸ್ತಿಯ ಮೂಲವನ್ನು  ಕೆದಕಿದ್ದಾರೆ. ತಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಹಾಗೂ ತಾವು ಕೂಡಿಟ್ಟಿರುವ ಒಟ್ಟು ಆಸ್ತಿಯ ಮೌಲ್ಯಗಳನ್ನು ಎಷ್ಟು ಎಂದು ಬಹಿರಂಗಪಡಿಸಿ, ತಾವು ರಾಜಕೀಯಕ್ಕೆ ಬರುವ ಮೊದಲು ಎಷ್ಟು ಆಸ್ತಿ  ಇಟ್ಟುಕೊಂಡಿದಿರಿ, ನಂತರ ಎಷ್ಟು ಗಳಿಸಿದಿರಿ  ಎಂಬುದನ್ನು ಬಹಿರಂಗಪಡಿಸಿ ಎಂದು ಸವಾಲು ಹಾಕಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ನೆಟ್ಟಿಗರು ಬನ್ನೇರುಘಟ್ಟ ಚಿಕ್ಕಮಗಳೂರು ಸಹಿತ  ಅನೇಕ ಕಡೆಗಳಲ್ಲಿ ತಾವು ತಂದೆ ಹಾಗೂ ಮಗನ ಹೆಸರಿನಲ್ಲಿ ಸಾವಿರಾರು ಕೋಟಿ ಗಟ್ಟಲೆಯ ಆಸ್ತಿಯನ್ನು ಮಾಡಿದ್ದೀರಿ, ಈ ಆಸ್ತಿ ಎಲ್ಲಿಂದ ಬಂತು ಎಂದು ಬಹಿರಂಗ ಪಡಿಸಿ ಎಂದು ಸವಾಲು ಹಾಕಿದ್ದಾರೆ.

ತಂದೆ ಮಗನಿಗೆ ಅಧಿಕಾರದ ಆಸೆ ಇನ್ನೂ ಮುಗಿದಿಲ್ಲ. ದಲಿತರ ಹೆಸರಿನಲ್ಲಿ ನಿಮ್ಮ ಕುಟುಂಬ ಎಲ್ಲಾ ಅನುದಾನವನ್ನು ನುಂಗಿ ನೀರು ಕುಡಿದಿದೆ. ದಲಿತರಿಗೆ ಮೋಸ ಮಾಡಿದ ಅತಿ ಭ್ರಷ್ಟ ಕುಟುಂಬ ನಿಮ್ಮದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Post a Comment

0 Comments