ಮೂಡುಬಿದಿರೆ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ, ಯುಎನ್‌ಡಿಪಿ ಯೋಜನೆ, ಇ.ಎಲ್.ಸಿ ಇಂಡಿಯಾ ವತಿಯಿಂದ ಸ್ತ್ರೀ ಶಕ್ತಿ ಸದಸ್ಯರಿಗೆ ಸ್ವ ಉದ್ಯೋಗ ಕುರಿತು 5 ದಿನಗಳ ಕಾಲ ಸಮಾಜ ಮಂದಿರದಲ್ಲಿ ಕೌಶಲ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಬುಧವಾರ ನಡೆಯಿತು.
ಮೂಡುಬಿದಿರೆ ತಹಶೀಲ್ದಾರ್ ಪುಟ್ಟರಾಜು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಹಿಂದಿನ ದಿನಗಳಲ್ಲಿ ಈ ದೇಶವು ಪುರುಷ ಪ್ರಧಾನ ದೇಶವಾಗಿತ್ತು. ಆದರೆ ಇಂದು ಸ್ತ್ರೀ-ಪುರುಷರಿಬ್ಬರೂ ಸಮಾನವಾಗಿದ್ದರೂ ಎಲ್ಲಾ ಕ್ಷೇತ್ರದಲ್ಲಿಯೂ ಮಹಿಳೆಯರಿಗೆ ಉದ್ಯೋಗ ಅವಕಾಶಗಳಿವೆ. ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕೆನ್ನುವ ಉದ್ದೇಶದಿಂದ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತರಲು ಉದ್ಯೋಗ ನೀಡುವ ಉದ್ದೇಶದಿಂದ ಉತ್ತಮ ಕಾರ್ಯಕ್ರಮವನ್ನು ನಡೆಸಲಾಯಿತು, . ಅದಕ್ಕಾಗಿಯೇ ಉದ್ಯೋಗದಂತಹ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,ಸ್ವ ಉದ್ಯೋಗದಿಂದ ಪಡೆದ ತರಬೇತಿಯನ್ನು ನಿಮ್ಮ ಮುಂದಿನ ಜೀವನದಲ್ಲಿ ಅಳವಡಿಸಿಕೊಂಡು ಸ್ವ ಉದ್ಯೋಗವನ್ನು ಆರಂಭಿಸಿ, ಸ್ವ ಉದ್ಯೋಗ ಮಾಡದೇ ಹೋದರೂ ನಿಮ್ಮ ಜೀವನಕ್ಕೆ ಈ ತರಬೇತಿಯು ಬಹಳ ಉಪಯೋಗಕಾರಿ ಎಂದ ಅವರು ಸರಕಾರದಿಂದ ಸಿಗುವ ಸವಲತ್ತುಗಳನ್ನೆಲ್ಲಾ ಬಳಸಿಕೊಂಡು ಸ್ವ ಉದ್ಯೋಗವನ್ನು ಪ್ರಾರಂಭಿಸಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಎ.ಎಲ್.ಸಿ ಇಂಡಿಯಾದ ಜಿಲ್ಲಾ ಸಂಯೋಜಕ ಸೂರ್ಯನಾರಾಯಣ,ಯುಎನ್‌ಡಿಪಿ ಯೋಜನೆ ಅಧಿಕಾರಿ ಉಮೇಶ್, ಮಂಗಳೂರು ತಾಲೂಕು
ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಹರಿಣಿ.ವಿ.ಕೋಟ್ಯಾನ್, ಉನ್ನತಿ ಸಖಿ ನಳಿನಿ ಮತ್ತು ಯಶೋಧ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಡುಬಿದಿರೆ ತಾಲೂಕಿನ ಮೇಲ್ವೀಚಾರಕಿಯರಾದ ರತಿ ಶೆಟ್ಟಿ, ಶುಭ, ಇಲಾಖೆಯ ರಚನಾ, ದೀಕ್ಷಾ , ನಿತಿನ್ ಅತಿಥಿಗಳಾಗಿ ಭಾಗವಹಿಸಿದ್ದರು.
ಮೇಲ್ವೀಚಾರಕಿಯರಾದ ನಳಿನಾಕ್ಷಿ ಸ್ವಾಗತಿಸಿ, ಭಾರತಿ ಕಾರ್ಯಕ್ರಮ ನಿರೂಪಿಸಿದರು. ಕಾತ್ಯಾಯಿನಿ ಧನ್ಯವಾದಗೈದರು.
0 Comments