ಮೂಡುಬಿದಿರೆ ಅಂಚೆ ಮನೋರಂಜನಾ ಕೂಟದಿಂದ ಬೀಳ್ಕೊಡುಗೆ ಸಮಾರಂಭ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ ಅಂಚೆ ಸಹಾಯಕರಾಗಿ, ಪುತ್ತೂರು ಪಟ್ಟಿಯಲ್ಲಿ ಆಡ್ಮಿನಿಸ್ಟ್ರೇಟರ್ ಆಗಿ ಎಂಟು ವರ್ಷಗಳಿಂದ ಸೇವೆ ಸಲ್ಲಿಸಿರುವ ಜನಾರ್ಧನ್ ಉಪ್ಪರ ಹಾಗೂ ಇತರ ಅಂಚೆ ಸಿಬ್ಬಂದಿಗಳಿಗೆ ಅಂಚೆ ಮನೋರಂಜನ ಕೂಟದ ವತಿಯಿಂದ ಗುರುವಾರ ಬೀಳ್ಕೊಡುಗೆ ಸಮಾರಂಭವು ಎಂ. ಸಿ. ಎಸ್ ಬ್ಯಾಂಕ್ ನ ಕಲ್ಪವೃಕ್ಷ ಸಭಾಂಗಣದಲ್ಲಿ. 

ಅಧ್ಯಕ್ಷತೆಯನ್ನು ಅಂಚೆಪಾಲಕಿ ಉಷಾ ವಹಿಸಿದ್ದರು. 

ಬಂಟ್ವಾಳ ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕಲೋಕನಾಥ್ ಎಂ ಮಾತನಾಡಿ, ವರ್ಗಾವಣೆಗಳು ಸರ್ವೇ ಸಾಮಾನ್ಯ ಆದರೆ ವರ್ಗಾವಣೆಯಾಗಿ ಹೋಗಬೇಕಾದರೆ ಕಳುಹಿಸಿ ಕೊಡುವ ರೀತಿಯ ಮುಖ್ಯ.

ಅಂಚೆ ಸಿಬ್ಬಂದಿಗಳೆಲ್ಲರೂ ಜನಾರ್ಧನ್ ಉಪ್ಪರ ಅವರ ಬಗ್ಗೆ ಉತ್ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ಮುಂದಿನ ವೃತ್ತಿ ಜೀವನವು ಚೆನ್ನಾಗಿರಲಿ ಎಂದು ಶುಭಹಾರೈಸಿದರು. 

ಮೂಡುಬಿದಿರೆ ಅಂಚೆ ಸಹಾಯಕ ಉಪ್ಪರ ಜನಾರ್ಧನ್ ಹಾಗೂ ವಲಯದಲ್ಲಿ ವರ್ಗಾವಣೆಗೊಂಡ ಇತರ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಪುರಸಭಾ ಸದಸ್ಯ ಜೋಸ್ಸಿ ಮಿನೇಜಸ್, ಉಡುಪಿ ಅಂಚೆ ಕಚೇರಿಯ ಪ್ರಧಾನ ಅಂಚೆ ಪಾಲಕ ಗುರುಪ್ರಸಾದ್ ಅಂಚೆ ಕಚೇರಿಯ ವಿವಿಧ ಅಂಚೆ ಪಾಲಕರು, ಸಿಬ್ಬಂದಿಗಳು.

ಕೊಡಂಗಲ್ಲು ಅಂಚೆ ಸಹಾಯಕ ದಿನೇಶ್ ಸ್ವಾಗತಿಸಿ, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಮೂಡುಬಿದಿರೆ ಅಂಚೆ ಸಹಾಯಕ ದಿನೇಶ್ ಧನ್ಯವಾದಗೈದರು.

Post a Comment

0 Comments