ಓದಲು ಚಿಮಿಣಿ ದೀಪ,ಶಾಲೆಗೆ 10ಕಿಮೀ ನಡಿಗೆ:ಇದು ಎಸ್.ಎಸ್. ಎಲ್.ಸಿ.ಸಾಧಕಿಯ ಸಾಧನೆಯ ಹಿಂದಿನ ಕಥೆ

ಜಾಹೀರಾತು/Advertisment
ಜಾಹೀರಾತು/Advertisment

 


 ಮೂಡುಬಿದಿರೆ :   ಪ್ರತಿದಿನ ೧೦ ಕಿ.ಮೀ ದೂರವನ್ನು ಕಾಲು ನಡಿಗೆಯಲ್ಲಿ ಕ್ರಮಿಸಿದಾಕೆ, ಆರ್ಥಿಕವಾಗಿ ಹಿಂದುಳಿದು ಚಿಮಿಣಿ ದೀಪದ ಬೆಳಕಿನಡಿಯಲ್ಲಿ ಕಷ್ಟಪಟ್ಟು ಓದಿ ತನ್ನ ಜ್ಞಾನ ದೀಪದಿಂದ ಊರನ್ನೇ ಬೆಳಗಿದಳು ಈ  ಎಸ್ಸೆಎಲ್ಸಿ ಸಾಧಕಿ  ಮೂಡುಬಿದಿರೆ ತಾಲೂಕಿನ  ಸೌಮ್ಯ.

 ಪಡುಮಾರ್ನಾಡು ಗ್ರಾ.ಪಂ. ವ್ಯಾಪ್ತಿಯ ಮೂಡುಮಾರ್ನಾಡು ಬೋವುದಗುಡ್ಡೆ ನಿವಾಸಿ ಶಂಕರ ಆಚಾರ್-ಶಾಂಭವಿ ಅವರ ಮೂರನೇಯ ಮಗಳಾಗಿರುವ ಸೌಮ್ಯ ಈ ಬಾರಿಯ ಎಸ್ಸೆಎಲ್ಸಿ ಪರೀಕ್ಷೆಯಲ್ಲಿ ೬೨೫ರಲ್ಲಿ ೬೦೭ ಅಂಕಗಳನ್ನು ಪಡೆಯುವ ಮೂಲಕ ತಾಲೂಕಿನ ಸರಕಾರಿ ಪ್ರೌಢಶಾಲೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ಸಾಧಕಿ ವಿದ್ಯಾರ್ಥಿಯಾಗಿದ್ದಾರೆ. ಈಕೆಯ ತಾಯಿ ಅನಾರೋಗ್ಯವನ್ನು ಹೊಂದಿದ್ದು  ತಂದೆ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ.

  ಬಡತನದ ಮಧ್ಯೆಯೂ ವಿದ್ಯೆಯಲ್ಲಿ ಆಸಕ್ತಿಯನ್ನು ಹೊಂದಿರುವ ಸೌಮ್ಯ ತನ್ನ ಪ್ರೌಢ ಶಿಕ್ಷಣವನ್ನು ಮೂಡುಮಾರ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಮಾಡಿದ್ದಾಳೆ. ಆದರೆ ಈಕೆ ಶಾಲೆಗೆ ಹೋಗಬೇಕಾದರೆ ಬಸ್ಸಿನ ಸೌಕರ್ಯವಿಲ್ಲದಿದ್ದರಿಂದ ಬೆಳಿಗ್ಗೆ ಮತ್ತು ಸಂಜೆ ೧೦.ಕಿಮೀ ದೂರದ ದಾರಿಯನ್ನು ನಡೆದುಕೊಂಡೇ ಸಾಗಬೇಕಾಗಿತ್ತು. ಇದಲ್ಲದೆ ಮನೆಯಲ್ಲಿ ವಿದ್ಯುತ್ ದೀಪದ ಸೌಕರ್ಯವಿಲ್ಲದರಿಂದ ಡೀಸೆಲ್ ಬಳಸಿ ಚಿಮಿಣಿ ದೀಪದ ಬೆಳಕಿನಲ್ಲಿಯೇ ಓದಬೇಕಾದ ಪರಿಸ್ಥಿತಿ ಇಂತಹ  ಸಮಸ್ಯೆಗಳ ಮಧ್ಯೆಯೂ ತಮ್ಮ ಮನೆಯವರ ಸಹಕಾರ ಹಾಗೂ ಶಾಲೆಯ ಶಿಕ್ಷಕರ ಪ್ರೋತ್ಸಾಹದೊಂದಿಗೆ ೬೦೭ ಅಂಕಗಳನ್ನು ಪಡೆದು ತಾಲೂಕಿನ ಸರಕಾರಿ ಶಾಲೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 ತನಗೆ ಉನ್ನತ ಶಿಕ್ಷಣವನ್ನು ಪಡೆಯಲು ಆಸೆಯಿದ್ದರೂ ಆರ್ಥಿಕವಾಗಿ ಸಮಸ್ಯೆ ಇರುವುದರಿಂದ ತಾನು ಪಿಯುಸಿ ಶಿಕ್ಷಣವನ್ನು ಪಡೆಯುವುದಿಲ್ಲವೆಂದುಕೊAಡಿದ್ದೆ ಆದರೆ ತನ್ನ ಹೈಸ್ಕೂಲಿನ ಶಿಕ್ಷಕರು ಕಾಲೇಜು ಶಿಕ್ಷಣವನ್ನು ಪಡೆಯಲೇ ಬೇಕೆಂದು ತಿಳಿಸಿದರಲ್ಲದೆ ತಾವು ಸಹಕಾರ ನೀಡುವುದಾಗಿಯೂ ಭರವಸೆಯನ್ನು ನೀಡಿದ ಹಿನ್ನಲೆಯಲ್ಲಿ ಕಾಲೇಜು ಶಿಕ್ಷಣವನ್ನು ಪಡೆಯಲು ಮನಸ್ಸು ಮಾಡಿದೆ. ಇದಕ್ಕಾಗಿ ಸಾಣೂರಿನ ಸರಕಾರಿ ಪ.ಪೂ.ಕಾಲೇಜಿಗೆ ಸೇರಿದ್ದು ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಈಗಲೂ ಕೂಡಾ ಮೂಡುಮಾರ್ನಾಡಿನಿಂದ ಬನ್ನಡ್ಕದವರೆಗೆ ನಡೆದುಕೊಂಡು ಬಂದು ಅಲ್ಲಿಂದ ಕಾರ್ಕಳಕ್ಕೆ ಹೋಗುವ ಬಸ್ಸಿನಲ್ಲಿ ಹೋಗುತ್ತಿದ್ದೇನೆ.

Post a Comment

0 Comments