ಮರಾಟಿ ಸಮುದಾಯದಿಂದ ಸತ್ಯನಾರಾಯಣ ಪೂಜೆ ಮತ್ತು ಅಭಿನಂದನ ಕಾರ್ಯಕ್ರಮ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಹಿರಿಯರ ಸಂಸ್ಕೃತಿ, ಸಂಪ್ರದಾಯಗಳೇ ಸಂಘಟನೆಗೆ ಬಲ. ಈ ವಿಚಾರಗಳನ್ನು ಉಳಿಸಿಕೊಂಡ ಸಮುದಾಯಗಳಲ್ಲಿ ಮರಾಟಿ ಸಮಾಜವೂ ಒಂದಾಗಿದೆ. ಸಂಘಟನೆಯ ಮೂಲಕ ಮಾಡುವ ಸಮಾಜ ಸೇವೆಯೇ ದೇವರ ಪೂಜೆ ಎಂದು ಶಾಸಕ ಉಮಾನಾಥ ಕೋಟ್ಯನ್ ಹೇಳಿದರು. 

 ಅವರು  ಮರಾಟಿ ಸಮಾಜ ಸೇವಾ ಸಂಘ ರಿ. ಮೂಡುಬಿದಿರೆ, ಮರಾಟಿ ಚಾರಿಟೆಬಲ್ ಟ್ರಸ್ಟ್ ರಿ. ಹಾಗೂ ಮಹಿಳಾ ವೇದಿಕೆ ಮತ್ತು ಯುವ ವೇದಿಕೆ ಇವುಗಳ ಆಶ್ರಯದಲ್ಲಿ ರವಿವಾರ ಸಮಾಜ ಮಂದಿರದಲ್ಲಿ  ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಅಭಿನಂದನ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದ ಅವರು ಮರಾಟಿ ಸಮಾಜ ಸಂಘದ ಕಟ್ಟಡ ನಿವೇಶನದ ಮನವಿಗೆ ಸ್ಪಂದಿಸಿ, ಇದಕ್ಕಾಗಿ ಎಲ್ಲ ಪ್ರಯತ್ನ ಮಾಡುವುದಾಗಿ ಹೇಳಿದರು.

ನಂತರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಲಿಂಗ ನಾಯ್ಕ್ ಅಮ್ಮೈ  ದಂಪತಿ ಸಹಿತ ಅಭಿನಂದಿಸಿ ಸನ್ಮಾನಿಸಲಾಯಿತು.

ನಿವೃತ್ತ ಶಿಕ್ಷಕ ಮಹಾಲಿಂಗ ನಾಯ್ಕ್ ಮೂಡುಬಿದಿರೆ, ಎಎಸ್‌ಐ ಹುದ್ದೆಗೆ ಪದೋನ್ನತಿ ಹೊಂದಿರುವ ಸುರೇಂದ್ರ ನಾಯ್ಕ್, ದಾನಿ ರಮೇಶ ನಾಯ್ಕ್ ಅವರನ್ನು ಗೌರವಿಸಲಾಯಿತು. 

ಸಂಘದ ಅಧ್ಯಕ್ಷ ರಾಮಚಂದ್ರ ಕೆಂಬಾರೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುರಸಭಾ ಅಧ್ಯಕ್ಷ ಪ್ರಸಾದ್‌ಕುಮಾರ್, ಮಂಗಳೂರು ವಿ.ವಿ. ವಿಶ್ರಾಂತ ಕುಲಸಚಿವ ಸುಂದರ ನಾಯ್ಕ್ , 

ಸಂಘದ ಕಾರ್ಯದರ್ಶಿ ಶಂಕರ ನಾಯ್ಕ್, ಕೋಶಾಧಿಕಾರಿ ಪಿ. ವಿಠಲ್ ನಾಯ್ಕ್ , ಮಹಿಳಾ ವೇದಿಕೆ ಅಧ್ಯಕ್ಷ ಪ್ರಭಾವಿ. ನಾಯ್ಕ್  ಮತ್ತಿತರರು ಉಪಸ್ಥಿತರಿದ್ದರು.

Post a Comment

0 Comments