ಸಂಪ್ರದಾಯದ ಆಚರಣೆಗಳನ್ನು ಶಾಲೆಯ ಆವರಣಕ್ಕೆ ತರುವುದು ಸರಿಯಲ್ಲ- ದಯಾನಂದ ಕತ್ತಾಲ್ ಸರ್

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ: ವಿದ್ಯಾರ್ಥಿಗಳೇ  ಶಾಲೆಯಲ್ಲಿ ನಾನು ಹಿಂದೂ, ನಾವು ಮುಸ್ಲಿಂ, ಕ್ರಿಶ್ಚನ್ ಎಂಬ ಬೇಧಭಾವ ಬೇಡ. ನಿಮ್ಮಲ್ಲಿ ಯಾರಾದರೂ  ನಿಮ್ಮ ಜಾತಿ, ಆಚರಣೆ, ಪರಂಪರೆ ಹಾಗೂ ಧರ್ಮದ ಬಗ್ಗೆ ಪ್ರಶ್ನಿಸಿದರೆ ಎಲ್ಲದಕ್ಕೂ ಉತ್ತರ ಭಾರತೀಯತೆ ಆಗಿರಲಿ. ವಿದ್ಯಾಭ್ಯಾಸಕ್ಕಾಗಿ ಶಾಲೆಗೆ ಬರುವ ತಾವು ಬೇರೆ ಬೇರೆ ವೇಷ ಕಟ್ಟಿಕೊಂಡು ಬರುವುದು, ಸಂಪ್ರದಾಯದ ಆಚರಣೆಗಳನ್ನು ಶಾಲೆಯ ಆವರಣಕ್ಕೆ ತರುವುದು ಸರಿಯಲ್ಲ.ಆಯಾಯ ಪ್ರದೇಶಕ್ಕೆ ತಕ್ಕಂತೆ ಆಯಾಯ ಪರಂಪರೆಗೆ ನಾವು ಒಗ್ಗಿಕೊಳ್ಳಬೇಕಾಗಿರುವುದು ನಮ್ಮ ಧರ್ಮ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಾಲ್  ಸರ್ ಹೇಳಿದರು.

ಬೆಳುವಾಯಿ ಬ್ಲಾಸಮ್ ಪ್ರೌಢಶಾಲೆಯಲ್ಲಿ - ಕ್ಲಸ್ಟರ್ ಮಟ್ಟದ ಕ್ಷೇತ್ರ ಶಿಕ್ಷಣಾಧಿಕಾರಿಗಳ  ಸಮೂಹ ಸಂಪನ್ಮೂಲದಿಂದ ಆಯೋಜಿಸಲಾದ ಸ್ವಾತಂತ್ರ್ಯ  ಅಮೃತ ಮಹೋತ್ಸವದ' ಅಂಗವಾಗಿ ನಡೆದ  ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸ ನೀಡಿದರು. 

 ಸ್ವಾತಂತ್ರ್ಯ, ಅಮೃತ ಮಹೋತ್ಸವದ ಸಂದರ್ಭದಲ್ಲಿ ಅಮೃತವನ್ನು ಸವಿಯಬೇಕೆ ವಿನಃ ವಿಷವನ್ನಲ್ಲ ಈ ನೆಲವನ್ನು ಎಲ್ಲರೂ ಬಹಳ ಪ್ರೀತಿಯಿಂದ ಪ್ರೀತಿಸಿ, ಗೌರವಿಸಿ, ಆರಾಧಿಸುತ್ತೇವೆ ಆದ್ದರಿಂದ ಯಾವುದೇ ಕಾರಣ ಭಾರತ ಮಾತೆಗೆ ಕೇಡನ್ನು ಬಯಸುವಂತಹ ವಿದ್ಯಾರ್ಥಿಗಳಾಗಬಾರದು, ವಿದ್ಯಾದೇಗುಲದಲ್ಲಿದ್ದುಕೊಂಡು ದೇಶ, ಸೈನ್ಯ, ಸಂಸ್ಕೃತಿ ವಿರೋಧಿ ಘೋಷಣೆಯನ್ನು ಮಾಡುವುದಲ್ಲ ಇವುಗಳೆಲ್ಲವನ್ನು ಬಿಟ್ಟು ವಿದ್ಯಾರ್ಥಿಗಳ ವಿದ್ಯಾರ್ಜನೆಯ ಮೂಲ ಆಶಯ ಏನೆಂಬುದನ್ನು ಅರಿತು ಅದರಂತೆ ಜೀವನದಲ್ಲಿ ನಡೆಯಬೇಕು ಎಂದು ತಿಳಿ ಹೇಳಿದರು.

  ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸಮಾರಂಭಕ್ಕೂ ಮೊದಲು ನಡೆದ ಮೆರವಣಿಗೆಗೆ ಬೆಳುವಾಯಿ ಗ್ರಾ.ಪಂ.ಅಧ್ಯಕ್ಷೆ ಸುಶೀಲಾ ಚಾಲನೆ ನೀಡಿದರು.

ಬಿ.ಆರ್.ಟಿ  ಸುಶೀಲಾ ಹೆಗ್ಡೆ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕಿ ಸೀಮಾ ನಿರೂಪಿಸಿ, ಸಮೂಹ ಸಂಪನ್ಮೂಲ ವ್ಯಕ್ತಿಯಾದ ಪ್ರಸನ್ನ ವಿ ಶೆಣೈ ಸ್ವಾಗತಿಸಿದರು. ಶಾಲಾ ಸಂಚಾಲಕ ಸೈಮನ್ ಮಸ್ಕರೇನಸ್ ಧನ್ಯವಾದಗೈದರು.

Post a Comment

0 Comments