ಗಾಜಿನಲ್ಲಿ ಮೂಡಿಬಂದ ಸಚಿವರ ಭಾವಚಿತ್ರ: ವಿಶ್ವಕರ್ಮ ಸಮಾಜದ ಯುವತಿಯರಿಂದ ಸಚಿವರಿಗೆ ಕಲಾಕಾಣಿಕೆ

ಜಾಹೀರಾತು/Advertisment
ಜಾಹೀರಾತು/Advertisment


ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ಭಾವಚಿತ್ರವನ್ನು ಗಾಜಿನಿಂದ ಬಿಡಿಸಿ ಸಚಿವರಿಗೆ ಉಡುಗೊರೆಯಾಗಿ ನೀಡಿದರು. 

ಮೇಕಪ್ ಆರ್ಟಿಸ್ಟ್ ಆಗಿರುವ ಕಾರ್ಕಳ ತಾಲೂಕಿನ ಹೊಸ್ಮಾರು ಗ್ರಾಮದವರಾದ ನಿಶಿತಾ ಆಚಾರ್ಯರವರು ಕೋಟ ಶ್ರೀನಿವಾಸ ಪೂಜಾರಿಯವರ ಅಭಿಮಾನಿಯಾಗಿದ್ದು ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಗ್ಲಾಸ್ ಡ್ರಾಯಿಂಗ್ ಕಲಾವಿದೆ ಆಗಿರುವ ಇವರು ಸಚಿವರ ಚಿತ್ರವನ್ನು ಬಿಡಿಸಿ ಉಡುಗೊರೆಯಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ನಿಶಿತಾರವರ ವಿಶೇಷ ಸಾಧನೆಯನ್ನು ಶ್ಲಾಘಿಸಿದ ಸಚಿವರು ಅವರನ್ನು ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ನಿಶಿತಾ ಆಚಾರ್ಯ ಅವರ ಸಹೋದರಿ ಸೌಮ್ಯ ಆಚಾರ್ಯರವರು ಸಚಿವರ ಬಗ್ಗೆ ಬರೆದ ಕವನವನ್ನು ಸಚಿವರಿಗೆ ನೀಡಿದರು.

Post a Comment

0 Comments