ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್,
ಆಲ್ ಇಂಡಿಯಾ ಮೊಬೈಲ್ ರಿಟೈಲರ್ ಅಸೋಸಿಯೇಷನ್ , ಲಯನ್ಸ್ ಕ್ಲಬ್ ಅಲಂಗಾರು,
ಎ.ಜೆ ರಕ್ತ ನಿಧಿ ಮಂಗಳೂರು, ಜೈನ್ ಮೆಡಿಕಲ್ ಸೆಂಟರ್ ಮೂಡುಬಿದಿರೆ ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ
ಇವುಗಳ ಸಹಯೋಗದಲ್ಲಿ ಜೈನ್ ಮೆಡಿಕಲ್ ಸೆಂಟರ್ ನಲ್ಲಿ ಶುಕ್ರವಾರ
ಬೃಹತ್ ರಕ್ತದಾನ ಶಿಬಿರ ನಡೆಯಿತು.
ಆಳ್ವಾಸ್ ಆಸ್ಪತ್ರೆಯ ಜನರಲ್ ಸರ್ಜನ್ ಡಾ.ಹರೀಶ್ ನಾಯಕ್ ಶಿಬಿರವನ್ನು ಉದ್ಘಾಟಿಸಿ
ಮಾತನಾಡಿ ಎಲ್ಲಾ ದಾನಕ್ಕಿಂತ ಶ್ರೇಷ್ಟವಾದ ದಾನ ರಕ್ತದಾನ.ವ್ಯಕ್ತಿಯ ಜೀವ ಉಳಿಸುವ ರಕ್ತವನ್ನು ಪ್ರತಿಯೊಬ್ಬರು ಒಂದು ಬಾರಿಯಾದರೂ ರಕ್ತದಾನ ಮಾಡಿ ಜೀವವನ್ನು ಉಳಿಸಿ. ಇಂದು ತುಂಬಾ ಜನರು ರಕ್ತದಾನ ಮಾಡುತ್ತಾರೆ ಆದರೆ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗಳ್ಲಿ ರಕ್ತದ ಅಭಾವ ಕಂಡು ಬರುತ್ತಿದೆ. ಅದಕ್ಕಾಗಿ ಸಂಸ್ಥೆಗಳು ರಕ್ತದಾನಿಗಳ ಪಟ್ಟಿಯನ್ನು ಮಾಡಿಟ್ಟುಕೊಂಡು ತುರ್ತು ಸಂದರ್ಭಗಳಲ್ಲಿ ಅವರಿಗೆ ಕರೆ ಮಾಡಿ ರಕ್ತದ ಉಪಯೋಗವನ್ನು ಪಡೆದುಕೊಂಡರೆ ಉತ್ತಮ ಎಂಬ ಸಲಹೆಯನ್ನು ನೀಡಿದ ಅವರು ತಮ್ಮ ವೃತ್ತಿ ಬದುಕಿನಲ್ಲಿ ತುರ್ತು ಸಂದರ್ಭದಲ್ಲಿ ತಾವು ಸ್ವತಃ ರಕ್ತದಾನ ಮಾಡಿ, ಜೀವವನ್ನು ಉಳಿಸಿದ ಘಟನೆಯನ್ನು ನೆನೆಪಿಸಿಕೊಂಡರು.
ಬ್ಲಡ್ ಹೆಲ್ಪ್ ಕೇರ್ ನ ನಜೀರ್ ಹುಸೇನ್ ಮಾತನಾಡಿ ಇಂದು ರಕ್ತದಾನಿಗಳ ಸಂಖ್ಯೆ ಹೆಚ್ಚಾಗಿದೆ ಮತ್ತು ಬ್ಲಡ್ ಬ್ಯಾಂಕ್ ಗಳಲ್ಲಿ ತುಂಬಾ ವೇಗವಾಗಿ ಖಾಲಿಯಾಗುತ್ತಿದೆ ಅದಕ್ಕಾಗಿ ಹೆಚ್ಚಿನ ಜನರು ರಕ್ತದಾನ ಮಾಡುವತ್ತ ಗಮನ ಹರಿಸಬೇಕು ಹಾಗೂ ಸಂಘ ಸಂಸ್ಥೆಗಳು ಇಂತಹ ಶಿಬಿರಗಳನ್ನು ಹೆಚ್ಚು ಹೆಚ್ಚಾಗಿ ಮಾಡುವ ಅಗತ್ಯವಿದೆ ಎಂದರು.
ರೋಟರಿ ಕ್ಲಬ್ ಆಫ್ ಮೂಡುಬಿದಿರೆ
ಟೆಂಪಲ್ ಟೌನ್ ನ ಅಧ್ಯಕ್ಷ ರಮೇಶ್ ಕುಮಾರ್, ಆಲ್ ಇಂಡಿಯಾ ಮೊಬೈಲ್ ರಿಟೈಲರ್ ನ ಮುಖ್ಯಸ್ಥ ರೂಪೇಶ್, ಜೈನ್ ಮೆಡಿಕಲ್ ಸೆಂಟರ್ ನ ಮಹಾವೀರ ಜೈನ್, ಅಲಂಗಾರು ಲಯನ್ಸ್ ಕ್ಲಬ್ ನ ಅಧ್ಯಕ್ಷ ವಿನೋದ್ ನಜ್ರತ್ ಮತ್ತಿತರರು ಉಪಸ್ಥಿತರಿದ್ದರು.
ಮುಸ್ತಾಫ ಸಿ.ಬಿದ್ರಿ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ನ ನಿಯೋಜಿತ ಅಧ್ಯಕ್ಷ ಪ್ರವೀಣ್ ಪಿರೇರಾ ವಂದಿಸಿದರು.
0 Comments