ಮೂಡುಬಿದಿರೆ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ, ಯುಎನ್‌ಡಿಪಿ ಯೋಜನೆ, ಎ.ಎಲ್.ಸಿ ಇಂಡಿಯಾ ವತಿಯಿಂದ ಸ್ತ್ರೀ ಶಕ್ತಿ ಸದಸ್ಯರಿಗೆ ಸ್ವ ಉದ್ಯೋಗ ಅಭಿವೃದ್ಧಿ ಬಗ್ಗೆ 5 ದಿನಗಳ ಕಾಲ ನಡೆಯುವ ಕೌಶಲ್ಯ ತರಬೇತಿ ಶಿಬಿರವು ಶುಕ್ರವಾರ ಸಮಾಜ ಮಂದಿರದಲ್ಲಿ ಆರಂಭಗೊಂಡಿತು.
ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಶಿಬಿರಕ್ಕೆ ಚಾಲನೆಯನ್ನು ನೀಡಿ ಮಾತನಾಡಿ ಮಹಿಳೆಯರು ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದಬೇಕೆಂಬ ಉದ್ದೇಶದಿಂದ ಸ್ವ ಉದ್ಯೋಗದ ತರಭೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಸರಕಾರವು ಮಹಿಳೆಯಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತಿದೆ ಇವುಗಳ ಪ್ರಯೋಜನವನ್ನು ಪಡೆದುಕೊಳ್ಳದಿದ್ದರೆ ಯೋಜನೆಯ ಉಪಯೋಗ ಇಲ್ಲದಂತ್ತಾಗುತ್ತದೆ. ಹಾಗಾಗಿ ತಾವು ಈ ಮೂಡುಬಿದಿರೆಯಲ್ಲಿ ಸ್ತ್ರೀ ಶಕ್ತಿ ಸದಸ್ಯರಿಗೆ ಕೌಶಲ್ಯ ತರಬೇತಿ ಶಿಬಿರ ಆರಂಭ ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿಯನ್ನು ಹೊಂದಬೇಕೆಂದು ಸಲಹೆ ನೀಡಿದ ಅವರು ಅಂಗನವಾಡಿ ಕಾರ್ಯಕರ್ತೆಯರು ಮತದಾನ, ಜನಗಣತಿ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದಲ್ಲದೆ
ಸ್ತ್ರೀ ಶಕ್ತಿ ಸದಸ್ಯರ ಅಭಿವೃದ್ಧಿಗೂ ಶ್ರಮಿಸುತ್ತಿರುವುದು ಅಭಿನಂದನಾರ್ಹರು ಎಂದರು.
ಯುಎನ್‌ಡಿಪಿ ಸಂಸ್ಥೆಯ ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳಿಗೆ ದು:ಖ ಆದಾಗ, ಸಂತೋಷ ಆದಾಗ ಅಥವಾ ಸಮಸ್ಯೆಗಳು ಬಂದಾಗ ಯಾವ ರೀತಿ ಸ್ಪಂದಿಸಬೇಕೆನ್ನುವುದರ ಬಗ್ಗೆ ಕೌನ್ಸ್ಲಿಂಗ್ ಮಾಡಿ ತಿಳಿಸಿ ಕೊಡಲಾಗುತ್ತಿದೆ. ಶಿಕ್ಷಣ ಪಡೆದ ನಂತರ ಉದ್ಯೋಗ ಅಥವಾ ಯಾವ ರೀತಿ ಬಿಸ್‌ನೆಸ್ ಮಾಡಬೇಕೆಂಬುದರ ಬಗ್ಗೆಯೂ ಮಾಹಿತಿ ಸಹಿತ ತರಬೇತಿಯನ್ನೂ ನೀಡಲಾಗುತ್ತಿದೆ ಎಂದರು.
ಎ.ಎಲ್.ಸಿ ಇಂಡಿಯಾದ ಜಿಲ್ಲಾ ಸಂಯೋಜಕ ಸೂರ್ಯನಾರಾಯಣ, ಮಂಗಳೂರು ತಾಲೂಕು
ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಹರಿಣಿ.ವಿ.ಕೋಟ್ಯಾನ್, ಉನ್ನತಿ ಸಖಿ ನಳಿನಿ ಮತ್ತು ಯಶೋಧ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಡುಬಿದಿರೆ ತಾಲೂಕಿನ ಮೇಲ್ವೀಚಾರಕಿಯರಾದ ರತಿ ಮತ್ತು ಶುಭ ಅತಿಥಿಗಳಾಗಿ ಭಾಗವಹಿಸಿದ್ದರು.
ಮೇಲ್ವೀಚಾರಕಿಯರಾದ ಭಾರತಿ ಸ್ವಾಗತಿಸಿದರು. ಕಾತ್ಯಾಯಿನಿ ಕಾರ್ಯಕ್ರಮ ನಿರೂಪಿಸಿದರು.
0 Comments