ಯಾರು ಈಕೆ ದ್ರೌಪದಿ ಮುರ್ಮು? ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ಅಚ್ಚರಿಯ ಆಯ್ಕೆಗೆ ದೇಶವೇ ಬೆರಗು.!

ಜಾಹೀರಾತು/Advertisment
ಜಾಹೀರಾತು/Advertisment

 


ರಾಷ್ಟ್ರಪತಿ ಚುನಾವಣೆಗೆ ಮುಹೂರ್ತ ಫಿಕ್ಸ್ ಆದಂತೆ ಅಭ್ಯರ್ಥಿಗಳು ಯಾರಾಗುತ್ತಾರೆ ಎನ್ನುವ ಚರ್ಚೆಗಳು ಜೋರಾಗಿ ನಡೆದಿತ್ತು. ಅದರಲ್ಲೂ ಸದಾ ಅಚ್ಚರಿಯ ಅಭ್ಯರ್ಥಿಗಳನ್ನು ಕೊಡುವ ಬಿಜೆಪಿ ಮೇಲಿನ ಕುತೂಹಲ ಒಂದು ಹೆಜ್ಜೆ ಜಾಸ್ತಿಯೇ ಇತ್ತು. ಅಂತೆಯೇ ಇಂದು ಬಿಜೆಪಿ ನೇತೃತ್ವದ ಎನ್.ಡಿ.ಎ. ಪಕ್ಷವು ರಾಷ್ಟ್ರಪತಿ ಚುನಾವಣೆಗೆ ತಮ್ಮ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ.

ಯಾರು ಈ ದ್ರೌಪದಿ ಮುರ್ಮು.?

ರಾಷ್ಟ್ರಪತಿ ಎನ್‍ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮುರನ್ನು ಘೋಷಣೆ ಮಾಡಲಾಗಿದೆ. ಒಡಿಶಾ ರಾಜ್ಯದವರಾದ ಇವರು ಆದಿವಾಸಿ ಜನಾಂಗದವರು. ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಾಗಿ ಬೆಳೆದ ಈಕೆ  ಜಾರ್ಖಂಡ್‍ನ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸೊದ್ದಾರೆ. ಹಾಗೂ ಜಾರ್ಖಂಡ್ ರಾಜ್ಯದಲ್ಲಿ ಅವಧಿ ಪೂರೈಸಿದ ಮೊದಲ ರಾಜ್ಯಪಾಲೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹಿಂದೆ ಭಾರತೀಯ ಜನತಾ ಪಾರ್ಟಿಯ ನೇತೃತ್ವದ ಎನ್.ಡಿ.ಎ. ಸರ್ಕಾರದಲ್ಲಿ ಅಂದಿನ ಪ್ರಧಾನಮಂತ್ರಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರು ಮುರ್ಮು ರವರಿಗೆ ಸಚಿವ ಸ್ಥಾನ ನೀಡಿದ್ದರು. ಈ ಜವಾಬ್ದಾರಿಯನ್ನು ಅತ್ಯಂತ ಶಿಸ್ತುಬದ್ಧವಾಗಿ ಯಶಸ್ವಿಯಾಗಿ ನಿರ್ವಹಿಸಿದ್ದರು.

ಆದಿವಾಸಿ ಬುಡಕಟ್ಟು ಜನಾಂಗದ ನಾಯಕಿಯಾಗಿ ಬೆಳೆದ ಈಕೆ ಆ ಸಮಾಜಕ್ಕೆ ಆದರ್ಶ ಹಾಗೂ ಮಾದರಿ ಮಹಿಳೆಯಾಗಿದ್ದಾರೆ.  ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಉನ್ನತ ಸ್ಥಾನವನ್ನು ಏರಬಹುದು ಎಂಬ ಸ್ಪಷ್ಟ ಸಂದೇಶವನ್ನು ಈಕೆ ಕಡೆಗಣನೆಗೆ ಒಳಗಾದ ಸಮಾಜಕ್ಕೆ ನೀಡಿದ್ದಾರೆ.

ಮೊದಲ ಬಾರಿಗೆ ಸ್ವಾತಂತ್ರ್ಯದ ಬಳಿಕ ಪರಿಶಿಷ್ಟ ಪಂಗಡದ ಬುಡಕಟ್ಟು ಜನಾಂಗದ ಈಶಾನ್ಯ ಭಾರತದ ಮಹಿಳೆಯನ್ನು ಆಯ್ಕೆ ಮಾಡಿರುವುದು ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ದ್ರೌಪದಿ ಮುರ್ಮು ಅವರು ಭಾರತದ ಬುಡಕಟ್ಟು ಜನಾಂಗದ ಪ್ರತಿಬಿಂಬದ ರೂಪದಲ್ಲಿ ನಮ್ಮನ್ನು ಪ್ರತಿನಿಧಿಸುವ ಆಶಯವಿದೆ.

ಸಮಾಜದಲ್ಲಿ ದೊಡ್ಡ ಕ್ರಾಂತಿಕಾರಿ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರಧಾನಿಗಳಾದ ನರೇಂದ್ರ ಮೋದಿಯವರು ಮತ್ತು ಎನ್‍ಡಿಎ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಇದು ಅತ್ಯಂತ ಸ್ವಾಗತಾರ್ಹ ನಿರ್ಧಾರ.

ದೇಶದ ಬಹುತೇಕ ದೊಡ್ಡ ವರ್ಗವಾದ ಬುಡಕಟ್ಟು ಜನಾಂಗದ ಪ್ರತಿಬಿಂಬವೆನಿಸಿದ ರೈಸಿನಾ ಹಿಲ್‍ನಲ್ಲಿ ರಾಷ್ಟ್ರಪತಿ ರೂಪದಲ್ಲಿ ಕಾಣಿಸಿರುವುದು ಭಾರತದ ಪ್ರಜಾಪ್ರಭುತ್ವದ ಅದ್ಭುತವಾದ ಉದಾಹರಣೆ. ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಮೂಲಕ ಸಾಮಾನ್ಯ ವರ್ಗದವರೂ ರಾಷ್ಟ್ರಪತಿಗಳಾಗಬಹುದು ಎಂಬುದಕ್ಕೆ ಒಂದು ಸ್ಪಷ್ಟ ಉದಾಹರಣೆ ಭಾರತದ ಗಣತಂತ್ರ. ಅದಕ್ಕೆ ಬಿಜೆಪಿ ಅವಕಾಶ ಮಾಡಿಕೊಟ್ಟಿದೆ.

Post a Comment

0 Comments