ಮೂಡುಬಿದಿರೆ ತಾಲೂಕು ಆಡಳಿತ ಸೌಧಕ್ಕೆ ತಹಶೀಲ್ದಾರ್ ಕಚೇರಿಯನ್ನು ಒಂದು ವಾರದೊಳಗೆ ಸ್ಥಳಾಂತರ ಮಾಡದಿದ್ದಲ್ಲಿ ಹಳ್ಳಿಹಳ್ಳಿಗಳಿಂದ ಜನರನ್ನು ಸೇರಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯದ ಮಾಜಿ ಸಚಿವ, ಕಾಂಗ್ರೇಸ್ ಮುಖಂಡ ಕೆ. ಅಭಯಚಂದ್ರ ಎಚ್ಚರಿಕೆ ನೀಡಿದರು.
ಮೂಡುಬಿದಿರೆ ಪ್ರೆಸ್‌ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ತಾಲೂಕು ಕಚೇರಿ ಉದ್ಘಾಟನೆಗೊಂಡು ತಿಂಗಳೇ ಕಳೆದರೂ ತಹಶೀಲ್ದಾರ್ ಕಛೇರಿ ಇನ್ನೂ ಹಳೇ ಕಟ್ಟಡದಲ್ಲೆ ಇದೆ. ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಮೀನ ಮೇಷ ಏಕೆ ಎಂದು ಅವರು ಪ್ರಶ್ನಿಸಿದರು.
ನೂತನ ಕಟ್ಟಡಕ್ಕೆ ಕಛೇರಿ ಸ್ಥಳಾಂತರ ಮಾಡಲು ತಡವಾದಲ್ಲಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪುರಸಭಾ ಸದಸ್ಯ ಸುರೇಶ್ ಕೊಟ್ಯಾನ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ, ವಕ್ತಾರ ರಾಜೇಶ್ ಕಡಲಕೆರೆ ಉಪಸ್ಥಿತರಿದ್ದರು.
0 Comments