ಕರ್ನಾಟಕದಲ್ಲೂ ಉತ್ತರ ಪ್ರದೇಶದ ಬುಲ್ಡೋಜರ್ ಪ್ರಯೋಗ ಭಾರೀ ಸದ್ದು ಮಾಡುತ್ತಿದೆ. ರಾಜ್ಯದ ಚಿಕ್ಕಮಗಳೂರಿನಲ್ಲಿರುವ ಅಕ್ರಮ ಗೋ ಮಾಂಸ ಅಡ್ಡೆಗಳ ಮೇಲೆ ನಗರ ಸಭೆ ಜೆಸಿಬಿ ಯಂತ್ರದ ಮೂಲಕ ದಾಳಿ ನಡೆಸಲು ಪ್ಲಾನ್ ರೂಪಿಸಿ ಅಖಾಡಕ್ಕೆ ಇಳಿದಿದೆ. ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರು ಪ್ರತಿನಿಧಿಸುತ್ತಿರುವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಚಿಕ್ಕಮಗಳೂರು ನಗರಸಭೆಯಿಂದ ಅಕ್ರಮ ಕಸಾಯಿಖಾನೆಗಳ ಮೇಲೆ ದಾಳಿ ಮಾಡಲು ಪ್ಲಾನ್ ರೂಪಿಸಿದೆ. ಚಿಕ್ಕಮಗಳೂರು ನಗರದಲ್ಲಿ ಒಂದೇ ಒಂದು ಕಸಾಯಿಖಾನೆಗೂ ಅನುಮತಿ ಇಲ್ಲ. ಆದ್ರೆ, ಅಕ್ರಮವಾಗಿ 40ಕ್ಕೂ ಹೆಚ್ಚಿವೆ. ನಿನ್ನೆ-ಮೊನ್ನೆಯಿಂದಲ್ಲ. ದಶಕಕ್ಕೂ ಅಧಿಕ ವರ್ಷದಿಂದ. ಗೋಹತ್ಯೆ ವಿರುದ್ಧ ಹೋರಾಡ್ದೋರು ಓದೆ ತಿಂದ್ರು. ಜೈಲಿಗೆ ಹೋದ್ರು. ಕೆಲವರು ಸತ್ತೇ ಹೋದ್ರು. ನಗರಸಭೆ ಯಾವತ್ತೋ ಮಾಡಬೇಕಾದ ಕೆಲಸವನ್ನ ಈಗ ಮಾಡಲು ಮುಂದಾಗಿದೆ.
ಸದ್ಯ 20 ಅಕ್ರಮ ಕಸಾಯಿಖಾನೆಗಳನ್ನು ಧ್ವಂಸ ಮಾಡಲಾಗಿದ್ದು ಇನ್ನೂ 20ಕ್ಕೂ ಅಧಿಕ ಕಸಾಯಿಖಾನೆಗಳಿಗೆ ನೋಟೀಸ್ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
0 Comments