ವಿಕೇಂದ್ರೀಕೃತ ತ್ಯಾಜ್ಯ ವಿಲೇವಾರಿ ಘಟಕಗಳ ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಅಮೃತ ನಿರ್ಮಲ ನಗರ ಯೋಜನೆಯನ್ವಯ ಪುರಸಭಾ ವ್ಯಾಪ್ತಿಯ 10 ವಾರ್ಡ್  ಗಳಲ್ಲಿ ಹಸಿ ತ್ಯಾಜ್ಯ, ಒಣ ಎಲೆ, ಇ ತ್ಯಾಜ್ಯ ಮೊದಲಾದ ತ್ಯಾಜ್ಯ ವಸ್ತುಗಳ ಸಂಗ್ರಹ ಮತ್ತು ವಿಲೇವಾರಿಗಾಗಿ ಸ್ಥಾಪಿಸಿರುವ ಘನ ತ್ಯಾಜ್ಯ ನಿರ್ವಹಣೆಯ ವಿಕೇಂದ್ರಿಕ ಘಟಕಗಳನ್ನು ಮಂಗಳವಾರ ಉದ್ಘಾಟಿಸಲಾಯಿತು. 

ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಮೂಡುಬಿದಿರೆ ಕೋರ್ಟನಲ್ಲಿ, ಆಡಳಿತ ಸೌಧ, ಜೈನ್ ಪ.ಪೂ.ಕಾಲೇಜು, ಮಹಾವೀರ ಕಾಲೇಜು, ಅರಣ್ಯ ಇಲಾಖೆ, ಪೊಲೀಸ್ ಠಾಣೆ, ಮೆಸ್ಕಾಂ, ಹಾಗೂ ಪುರಸಭೆಯ ಆವರಣದಲ್ಲಿ ಸ್ಥಾಪಿಸಿರುವ ಇ -ತ್ಯಾಜ್ಯ  ಘಟಕಗಳಿಗೆ ಚಾಲನೆ ನೀಡಿ ಕೀಯನ್ನು ಹಸ್ತಾಂತರಿಸಿದರು.

ನಂತರ ಜೈನ ಪ.ಪೂ.ಕಾಲೇಜಿನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಉತ್ತಮ ಆರೋಗ್ಯ ದೃಷ್ಟಿಯಿಂದ ಮತ್ತು ಸ್ವಚ್ಛ ಪರಿಸರದ ಪರಿಕಲ್ಪನೆಯೊಂದಿಗೆ ಲೇನ್ ಕಾಂಪೋಸ್ಟರ್ ಮತ್ತು ಲಿಫ್ ಕಾಂಪೋಸ್ಟ‌ರ್ ಘಟಕಗಳನ್ನು ಸ್ಥಾಪಿಸಲಾಗಿದೆ. ಹಸಿ ಕಸದ ಗೊಬ್ಬರವನ್ನು ಮಾಡಲು ಮೊದಲು ಜಾಗವನ್ನು ನೀಡಿ ಅವಕಾಶ ಕಲ್ಪಿಸಿದ್ದಲ್ಲದೆ ಶೂನ್ಯ ತ್ಯಾಜ್ಯವನ್ನು ಮಾಡುವ ಮೂಲಕ ಜೈನ್‌ ಪ.ಪೂ.ಕಾಲೇಜು ಮಾದರಿಯಾಗಿದೆ ಎಂದರು. 

ಸರಕಾರಿ ಕಚೇರಿಗಳು ಸೇರಿ ಎರಡು ಕಾಲೇಜುಗಳು ಇ -ತ್ಯಾಜ್ಯ ಘಟಕಗಳಿಗೆ ಅವಕಾಶ ನೀಡಿವೆ. ಮುಂದಿನ ದಿನಗಳಲ್ಲಿ ಫ್ಲ್ಯಾಟ್ ಹಾಗೂ ಕಾಲೋನಿಗಳಲ್ಲೂ ಇಂತಹ ಘಟಕಗಳನ್ನು ಸ್ಥಾಪಿಸುವಂತೆ ಸೂಚನೆ ನೀಡಲಾಗುವುದು ತಿಳಿಸಿದರು. 

ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಇಂದು ಎಂ., ಡಿಜೆ ವಿವಿ ಸಂಘದ ಸಂಚಾಲಕ ಹೇಮರಾಜ್‌ ಕೆ ಅಧ್ಯಕ್ಷತೆ ವಹಿಸಿದ್ದರು. 

ಪುರಸಭಾ ಉಪಾಧ್ಯಕ್ಷೆ ಸುಜಾತ ಶಶಿಧರ್‌, ಸದಸ್ಯರಾದ ಪಿ.ಕೆ.ಥೋಮ‌ಸ್, ಕೊರಗಪ್ಪ, ಸುರೇಶ್‌ ಪ್ರಭು,ಶ್ವೇತಾ ಕುಮಾರಿ, ರಾಜೇಶ್‌ ನಾಯ್ಡ್, ಸೌಮ್ಮ ಶೆಟ್ಟಿ, ದಿವ್ಯ ಜಗದೀಶ್, ನಾಮನಿರ್ದೇಶಿತ ಸದಸ್ಯರಾದ ರಾಘವ ಹೆಗ್ಡೆ, ಗಿರೀಶ್ ಕುಮಾರ್, ಕಾಲೇಜಿನ ಪ್ರಾಂಶುಪಾಲ ಮಧುಕರ್‌, ಉಪನ್ಯಾಸಕಿ ಸಂಧ್ಯಾ, ಉಪನ್ಯಾಸಕ ಪ್ರಭಾಷ್‌ ಕುಮಾರ್ ಬಲ್ನಾಡು ಉಪಸ್ಥಿತರಿದ್ದರು.

Post a Comment

0 Comments