ಗುಜರಾತ್: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ.
ಮೋದಿ ಗುಜರಾತ್‌ನ ಸಿಎಂ ಆಗಿದ್ದ ಸಂದರ್ಭ ಜಾರಿಗೊಳಿಸಿದ ಯೋಜನೆಗಳಾದ ಆಯುಷ್ಮಾನ್ ಭಾರತ್ ಯೋಜನೆ, ಮಿಷನ್ ಇಂದ್ರಧನುಷ್ ಮತ್ತು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (ಪಿಎಂಎಂವಿವೈ) ನಂತಹ ಆರೋಗ್ಯ ರಕ್ಷಣೆ ಯೋಜನೆಗಳ ಮಾದರಿಯಲ್ಲೇ ದೇಶಾದ್ಯಂತ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ನಿನ್ನೆ ಪ್ರಧಾನಿ ಮೋದಿ ಗುಜರಾತ್‌ನ ನವಸಾರಿಗೆ ಭೇಟಿ ನೀಡಿ ಸುಮಾರು 3050 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಗುಜರಾತ್‌ನಲ್ಲಿ ಕೈಗೊಂಡ ಆರೋಗ್ಯ ರಕ್ಷಣೆಯ ಉಪಕ್ರಮಗಳ ಹಲವಾರು ಉದಾಹರಣೆಗಳನ್ನು ಉಲ್ಲೇಖಿಸಿ, ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಗಳು ಸಮಾಜದ ದುರ್ಬಲ ವರ್ಗಗಳಿಗೆ ಹೇಗೆ ಉಪಯೋಗವಾಯಿತೆಂಬುದನ್ನು ತಿಳಿಸಿದರು.
ಅಷ್ಟೇ ಅಲ್ಲದೇ ಗುಜರಾತ್‌ನಲ್ಲಿ ಆರೋಗ್ಯ ಮೂಲಸೌಕರ್ಯ ಸುಧಾರಿಸಿದೆ ಮತ್ತು ಆರೋಗ್ಯ ಸೂಚಕಗಳು ಸ್ಥಿರವಾಗಿ ಸುಧಾರಿಸುತ್ತಿವೆ. ಮೂರನೇ ಸುಸ್ಥಿರ ಅಭಿವೃದ್ಧಿ ಗುರಿಗಳ ಸೂಚ್ಯಂಕದಲ್ಲಿ, ಗುಜರಾತ್ ದೇಶದ ಅಗ್ರಸ್ಥಾನದಲ್ಲಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಬಡವರ ಆರೋಗ್ಯಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದೆವು. ಆ ಅನುಭವಗಳು ಈಗ ದೇಶಾದ್ಯಂತ ಬಡವರಿಗೆ ಪ್ರಯೋಜನವನ್ನು ನೀಡುತ್ತಿವೆ' ಎಂದು ಹೇಳಿದರು.
ಮೋದಿ ಗುಜರಾತ್‌ನ ಸಿಎಂ ಆಗಿದ್ದಾಗ ಜಾರಿಗೊಳಿಸಿದ ಚಿರಂಜೀವಿ ಯೋಜನೆ ಅಡಿಯಲ್ಲಿ 14 ಲಕ್ಷ ಗರ್ಭಿಣಿಯರಿಗೆ ಅನುಕೂಲವಾಗಿದೆ. ಖಿಲ್ಸಿಲತ್ ಯೋಜನೆಗಳನ್ನು ಮಿಷನ್ ಇಂದ್ರಧನುಷ್ ಮತ್ತು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಹೆಸರಲ್ಲಿ ಜಾರಿಗೊಳಿಸಲಾಗಿದೆ. ಇದಕ್ಕೆ ಮೂರು ಲಕ್ಷ ಮಹಿಳೆಯರು ಒಳಪಟ್ಟಿದ್ದಾರೆ. ಆರೈಕೆ ಕೇಂದ್ರ ಮತ್ತು ದೀನದಯಾಳ್
ಔಷಧಾಲಯಗಳನ್ನು ನಿರ್ಮಿಸಲಾಗಿದ್ದು, ಲಕ್ಷಾಂತರ ಮಂದಿ ಇದರ ಪ್ರಯೋಜನ ಪಡೆದಿದ್ದಾರೆ ಎಂದರು.
0 Comments